ಇಡೀ ಭಾರತದಲ್ಲೀಗ ಹೆಮ್ಮೆಯ ಪುತ್ರರನ್ನು ಕಳೆದುಕೊಂಡ ಸೂತಕದ ಛಾಯೆ ಆವರಿಸಿಕೊಂಡಿದೆ. ಪುಲ್ವಾಮಾ ದಾಳಿಯಲ್ಲಿ ವೀರ ಯೋಧರು ಮೃತಪಟ್ಟ ಸಂಕಟ ಪ್ರತೀ ಭಾರತೀಯರ ಮನಸುಗಳಲ್ಲಿಯೂ ಮಡುಗಟ್ಟಿ ನಿಂತಿದೆ. ಇದೀಗ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ದೇಶಕ್ಕಾಗಿ ಪ್ರಾಣ ಬಿಟ್ಟ ಯೋಧರ ಕೊನೇಯ ಮಾತುಗಳಿಗೆ ಹಾಡಿನ ರೂಪ ಕೊಡುವ ಮೂಲಕ ಸಮಸ್ತ ಯೋಧರಿಗೂ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಅಮ್ಮಾ ಭಾರತ ಮಾತೆ ಎಂಬ ಈ ಹಾಡನ್ನು ನಾಗೇಂದ್ರ ಪ್ರಸಾದ್ ಅವರೇ ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ವೀರ ಯೋಧನ ಕೊನೇಯ ಮಾತು ಎಂಬ ಶೀರ್ಷಿಕೆ ಹೊಂದಿರೋ ಈ ಹಾಡಿಗೆ ಸಾಧು ಕೋಕಿಲಾ ತಮ್ಮ ಅದ್ಭುತ ಕಂಠದಲ್ಲಿ ಭಾವಪೂರ್ಣವಾಗಿ ಧ್ವನಿಯಾಗಿದ್ದಾರೆ.
ದೇಶಕ್ಕಾಗಿಯೇ ಜೀವಮಾನವನ್ನೇ ಮುಡಿಪಾಗಿಡೋ ವೀರ ಯೋಧರ ಕಡೇಯ ಘಳಿಗೆಯ ಮಾತುಗಳಿಗೆ ನಾಗೇಂದ್ರ ಪ್ರಸಾದ್ ಅವರು ಈ ಮೂಲಕ ಹಾಡಿನ ಕನ್ನಡಿ ಹಿಡಿದಿದ್ದಾರೆ. ಭಾರತಕ್ಕೆ ಭಾರತವೇ ಮಡಿದ ಯೋಧರಿಗಾಗಿ ಕಂಬನಿ ಮಿಡಿಯುತ್ತಿರೋ ಈ ಹೊತ್ತಿನಲ್ಲಿ ಈ ಅರ್ಥಪೂರ್ಣವಾದ ಹಾಡು ತಯಾರಾಗಿದೆ. ಇನ್ನು ಕೆಲವೇ ದಿನಗಳಲ್ದಲಿ ಇದು ಮ್ಯೂಸಿಕ್ ಬಜ಼ಾರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ
No Comment! Be the first one.