ಅದ್ಯಾಕೋ ಏನೋ ಗೊತ್ತಿಲ್ಲ. ಈ ರೂಮರುಗಳು ಹೋಗಿ ಬಂದು ದಿಗಂತನಿಗೇ ಸುತ್ತಿ ಕೊಳ್ಳುತ್ತವೆ!

ನೆನ್ನೆ ರಾತ್ರಿ ದಿಢೀರನೆ ಒಂದು ನ್ಯೂಸು ಸಿನಿಮಾ ಪತ್ರಕರ್ತರ ಕಿವಿಗೆ ಅಪ್ಪಳಿಸಿತ್ತು. ‘ದಿಗಂತ್’ಗೆ ಆಕ್ಸಿಡೆಂಟ್ ಆಗಿದೆಯಂತೆ. ಐಂದ್ರಿತಾ ಕೂಡಾ ಫೋನು ತೆಗೀತಿಲ್ಲ. ಅವರ ಕಾರ್ ಡ್ರೈವರ್ ಪ್ರಸನ್ನನೂ ಫೋನೆತ್ತುತ್ತಿಲ್ಲ’ ಅಂತಾ. ಅದ್ಯಾವಳೋ ನಟಿ ಹಿಂದಿ ಪಿಚ್ಚರ್ ಶೂಂಟಿಂಗಲ್ಲಿ ಚಾಕು ಎಸೆದು ದಿಗಂತನ ಕಣ್ಣಿಗೆ ಬಿದ್ದಿತ್ತು. ಆವತ್ತು ಐಬಾದ ಕಣ್ಣು ಇವತ್ತಿಗೂ ನೆಟ್ಟಗಾಗಿಲ್ಲ. ದೂದ್ ಪೇಡ ದಿಗಂತನ ಮುಖಲಕ್ಷಣವೇ ಹದಗೆಟ್ಟು ಕನ್ನಡಕವಿಲ್ಲದೆ ಈತ ಓಡಾಡದಂತಾಗಿದೆ. ಇದರ ಮಧ್ಯೆಯೂ ಈ ಬಿಳೀ ಹುಡುಗ ಐಂದ್ರಿತಾಳನ್ನು ಮದುವೆಯಾಗಿ ನೆಮ್ಮದಿಯಾಗಿದ್ದಾನೆ ಅನ್ನೋದೇ ಸಮಾಧಾನದ ಸಂಗತಿಯಾಗಿದೆ.

ಈಗ ನೋಡಿದರೆ ದಿಗಂತನಿಗೆ ಅಪಘಾತವಾಗಿದೆ ಅಂದರೆ, ಕೇಳಿದ ಯಾರಿಗೇ ಆದರೂ ಆಘಾತವಾಗದೇ ಇರುತ್ತದಾ? ಹೇಗೋ ಮಾಡಿ ನಡುರಾತ್ರಿಯಲ್ಲಿ ಐಂದ್ರಿತಾಳ ಪರ್ಸನಲ್ ನಂಬರನ್ನು ಹುಡುಕಿ ‘ದಿಗಂತನಿಗೇನಾಯ್ತು?’ ಅಂತಾ ವಿಚಾರಿಸಲಾಗಿ, “ಅಯ್ಯೋ ಡಿಗ್ಗಿಗೆ ಏನೂ ಅಗಿಲ್ಲ. ಯಾವಾಗ್ಲೂ ನಮ್ಮ ಬಗ್ಗೆನೇ ರೂಮರ್ಸ್ ಕ್ರಿಯೇಟ್ ಅಗುತ್ತೆ. ನಾವು ಬಿರಿಯಾನಿ ತಿನ್ಕೊಂಡು ಆರಾಮವಾಗಿ ಮೂವಿ ನೋಡ್ತಿದೀವಿ. ಇಬ್ರೂ ಮಲಗೋ ಬಗ್ಗೆ ಪ್ಲಾನ್ ಮಾಡ್ತಿದೀವಿ” ಅಂದಳು.
ಅಲ್ಲಿಗೆ ಸಿನಿಮಾ ಪತ್ರಕರ್ತರ ಮನಸ್ಸು ನಿರಾಳವಾಗಿ, ತಂತಮ್ಮ ಅಫೀಸುಗಳಿಗೆ ಫೋನ್ ಮಾಡಿ “ಏನೂ ಆಗಿಲ್ಲ” ವೆನ್ನುವ ಸುದ್ದಿ ಮುಟ್ಟಿಸಿ ನಿರಾಳವಾಗಿ ಮಲಗುವಂತಾಯಿತು.

ಸಿನಿಮಾ ಸ್ಟಾರ್’ಗಳ ಬಗ್ಗೆ ಇಂಥ ಗಾಳಿ ಸುದ್ದಿ ಹಬ್ಬಿಸಿ ವಿಕೃತ ಸಂತೋಷ ಪಡುವ ಜಾಲ ಯಾವ ಕಾಲದಿಂದಲೂ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇದು ನಟ ನಟಿಯರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಕಾಡುತ್ತಲೇ ಇದೆ.

CG ARUN

ರಿಸರ್ಚು-ರಿವೇಂಜುಗಳ ನಡುವೆ ರಾರಾಜಿಸಿದ ರಾಂಧವ!

Previous article

ಕೊಲೆಗಾರನನ್ನು ಹುಡುಕುವವರ ಸುತ್ತ ನನ್ನ ಪ್ರಕಾರ!

Next article

You may also like

Comments

Leave a reply

Your email address will not be published. Required fields are marked *

More in cbn