ಕಟ್ಟದ ಕಾರ್ಮಿಕರಾಗಿ ಬದುಕು ಕಟ್ಟಿಕೊಂಡ ರಮೇಶ್ ರೆಡ್ಡಿ ಅವರು ಕಟ್ಟಡ ಗುತ್ತಿಗೆದಾರರಾಗಿ, ಯಶಸ್ವೀ ಉದ್ಯಮಿಯಾಗಿ ನಂತರ ನಿರ್ಮಾಪಕರಾಗಿಯೂ ಬೆಳೆದು ಬಂದ ಹಾದಿ ನಿಜಕ್ಕೂ ದೊಡ್ಡದು. ಹೀಗಾಗಿ ಸಮಾಜದ ತಳಸಮುದಾಯದಿಂದ ಹಿಡಿದು ಎಲ್ಲ ವರ್ಗದವರ ಬವಣೆಗಳನ್ನು ರಮೇಶ್ ರೆಡ್ಡಿ ಅರ್ಥಮಾಡಿಕೊಳ್ಳಬಲ್ಲರು.

ಬಡತನ, ಹಸಿವಿನ ಪರಿಚಯವಿರುವವರಿಗೆ ಮಾತ್ರ ಇಂಥಾ ಕಷ್ಟಕಾಲದಲ್ಲಿ ನೊಂದವರಿಗೆ ಸಹಾಯ ಹಸ್ತ ಚಾಚಲು ಸಾಧ್ಯ, ಯಶಸ್ವಿನಿ ಎಂಟರ್ ಪ್ರೈಸಸ್ ಮತ್ತು ಈಗ ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸುತ್ತಿರುವ ರಮೇಶ್ ರೆಡ್ಡಿ ಚಿತ್ರರಂಗ, ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲಕ್ಕೆ ಗಾರೆ ಕೆಲಸದ ಮೂಲಕ ಬದುಕು ಕಟ್ಟಿಕೊಂಡ ರಮೇಶ್ ರೆಡ್ಡಿ ಅವರು ನಂತರ ಕಟ್ಟಡ ಗುತ್ತಿಗೆದಾರರಾಗಿ, ಯಶಸ್ವೀ ಉದ್ಯಮಿಯಾಗಿ ನಂತರ ನಿರ್ಮಾಪಕರಾಗಿಯೂ ಬೆಳೆದು ಬಂದ ಹಾದಿ ನಿಜಕ್ಕೂ ದೊಡ್ಡದು. ಹೀಗಾಗಿ ಸಮಾಜದ ತಳಸಮುದಾಯದಿಂದ ಹಿಡಿದು ಎಲ್ಲ ವರ್ಗದವರ ಬವಣೆಗಳನ್ನು ರಮೇಶ್ ರೆಡ್ಡಿ ಅರ್ಥಮಾಡಿಕೊಳ್ಳಬಲ್ಲರು. ಈಗ ಕರೋನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಚಿತ್ರರಂಗದ ಸಾವಿರಾರು ಕಾರ್ಮಿಕರ ನೆರವಿಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಮುಂದಾಗಿದ್ದಾರೆ. ಎಂದಿನಂತೆ ರಮೇಶ್ ರೆಡ್ಡಿ ಅವರು ಫೌಂಡೇಷನ್ನಿನ ಈ ಕಾರ್ಯವನ್ನು ಮುಂದೆ ನಿಂತು ನೆರವೇರಿಸುತ್ತಿದ್ದಾರೆ. ಸಿನಿಮಾ ಕಾರ್ಮಿಕರ ೧೮ ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರುಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಶನ್ ವಿತರಿಸಲಿದ್ದು, ಈ ಕಾರ್ಯಕ್ಕೆ ನಗರದ ಬನಶಂಕರಿ ಪೋಸ್ಟ್ ಆಫೀಸ್ ಬಳಿಯಲ್ಲಿ ಚಾಲನೆ ನೀಡಲಾಯಿತು.

ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ ರಾ ಗೋವಿಂದು, ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್ ಸೇರಿದಂತೆ ಹಲವರು ಈ ಕಾರ್ಯಕ್ಕೆ ಚಾಲನೆ ನೀಡಿದರು. ಇನ್ಪೋಸಿಸ್ ಫೌಂಡೇಷನ್ ವತಿಯಿಂದ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ವಿತರಣೆಯ ಕಾರ್ಯವನ್ನು ಮುಂದುವರೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿ, ಇನ್ಪೋಸಿಸ್ ಫೌಂಡೇಷನ್‌ನ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರಿಂದ ದೇಶ ಹಾಗೂ ರಾಜ್ಯದಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗುತ್ತಿವೆ. ಈ ತೊಂದರೆಯ ಸಮಯದಲ್ಲಿ ಚಲನಚಿತ್ರ ಕಾರ್ಮಿಕರ ಬಗ್ಗೆ ಕಾಳಜಿಯನ್ನು ತೋರಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಹೇಳಿದರು.

ಸಾರಾ ಗೋವಿಂದು ಮಾತನಾಡಿ, ೧೮ ಚಲನ ಚಿತ್ರ ಕಾರ್ಮಿಕ ಸಂಘಟನೆಗಳ ಅಡಿಯಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕರೋನಾ ಕರ್ಪ್ಯೂದಿಂದಾಗಿ ಎಲ್ಲರ ಜೀವನ ತೊಂದರೆಗೆ ಸಿಲುಕಿದೆ. ಅವರ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ನೀಡಲು ಇನ್ಪೋಸಿಸ್ ಫೌಂಡೇಷನ್ ನ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ  ಮುಂದಾಗಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್‌, ಇನ್ಪೋಸಿಸ್‌ ಫೌಂಡೇಶನ್‌ ನ ಪ್ರಶಾಂತ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಾಮಾಚಾರಿಗೆ ಮೂವತ್ತಾಗಲಿದೆ!

Previous article

ಕಸ ಎಸೆಯುವವರ ಕಪಾಳಕ್ಕೆ ಬಾರಿಸುವಂಥಾ ಚಿತ್ರ!

Next article

You may also like

Comments

Leave a reply

Your email address will not be published. Required fields are marked *