ದೃಶ್ಯ ಮಾಧ್ಯಮಕ್ಕೊಂದು ಶಕ್ತಿ ಇದೆ. ನೋಡುವ ಕಣ್ಣು ಮತ್ತು ಮನಸ್ಸಿಗೆ ಇಷ್ಟವಾಗಿಬಿಟ್ಟರೆ ಸಾಕು. ನೋಡನೋಡುತ್ತಲೇ ಜ್ವರದಂತೆ ಅದರ ತಾಪ ಏರಿಬಿಡುತ್ತದೆ. ನೆನ್ನೆ ಅದ್ಯಾವ ಘಳಿಗೆಯಲ್ಲಿ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದ ಎರಡನೇ ಟೀಸರ್ ರಿಲೀಸಾಯ್ತೋ? ಒಬ್ಬರಿಂದ ಒಬ್ಬರಿಗೆ ಲಿಂಕು ಹರಡಿಬಿಟ್ಟಿತ್ತು. ‘ಇನ್ಸ್’ಪೆಕ್ಟರ್ ವಿಕ್ರಂ ಟೀಸರ್ ನೋಡಿದ್ರಾ? ಸಖತ್ತಾಗಿದೆ ಅಲ್ವಾ?’ ಅನ್ನೋ ಸಂದೇಶಗಳೂ ರವಾನೆಯಾದವು. ಟೀಸರ್ ಕುರಿತ ಕ್ರೇಜ಼ು ಹೆಚ್ಚಾಗಿ ವೈರಲ್ ಆಗುತ್ತಿದ್ದಂತೇ ಅದರ ಹಕ್ಕನ್ನು ಪ್ರತಿಷ್ಠಿತ ಆನಂದ್ ಆಡಿಯೋ ಪಡೆದಿದೆ. ಇವತ್ತು ಅದೇ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಯಾರೂ ನಿರೀಕ್ಷಿಸಲಾರದಷ್ಟು ವೀಕ್ಷಣೆಗೆ ಒಳಪಡುತ್ತಿದೆ.
ಈಗಾಗಲೇ ಬಿಡುಗಡೆಗೊಂಡಿರುವ ಇನ್ಸ್‌ಪೆಕ್ಟರ್ ವಿಕ್ರಂ ಟೀಸರ್‌ಗಳು ಪ್ರಜ್ವಲ್ ಪಾಲಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಅಧ್ಯಾಯ ತೆರೆಯುತ್ತದೆ ಅನ್ನೋ ಸುಳಿವನ್ನು ನೀಡಿವೆ. ವಿಖ್ಯಾತ್ ಚಿತ್ರ ನಿರ್ಮಾಣದಲ್ಲಿ ಶ್ರೀ ನರಸಿಂಹ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನವೀನ್ ಕುಮಾರ್ ಸೃಷ್ಟಿಸಿರುವ ನೆರಳು, ಬೆಳಕಿನ ದೃಶ್ಯಗಳನ್ನು ಟೀಸರ್ ನಲ್ಲಿ ನೋಡೋದೇ ಮಜವಾಗಿದೆ. ಇನ್ನು ಇಡೀ ಸಿನಿಮಾ ಅದೆಷ್ಟು ಅದ್ಭುತವಾಗಿ ಬಂದಿರಬಹುದು ಎನ್ನುವ ಕುತೂಹಲವನ್ನೂ ಹುಟ್ಟುಹಾಕಿದೆ.

ಇನ್ಸ್’ಪೆಕ್ಟರ್ ಧಿರಿಸಿನಲ್ಲಿರುವ ಪ್ರಜ್ವಲ್ ಈ ಟೀಸರ್’ನಲ್ಲಿ ಮುದ್ದು ಮುದ್ದಾಗಿಯೂ, ಖಡಕ್ ಅಧಿಕಾರಿಯಂತೆಯೂ ಕಾಣುತ್ತಿದ್ದಾರೆ. ಹೇಳಿ ಕೇಳಿ ಪ್ರಜ್ಜುಗೆ ಪಡ್ಡೆ ಹುಡುಗರು ಮಾತ್ರವಲ್ಲದೆ, ಮಹಿಳಾ ಅಭಿಮಾನಿಗಳೂ ಅಪಾರವಾಗಿದ್ದಾರೆ. ಹೀಗಾಗಿ ಎಲ್ಲ ಕಡೆಯೂ ಈಗ ‘ವಿಕ್ರಮ್’ ಟೀಸರ್ ಹವಾ ಸೃಷ್ಟಿಸಿದೆ. ಇದು ಸಿನಿಮಾದ ದೊಡ್ಡ ಗೆಲುವಿನ ಮುನ್ಸೂಚನೆ ಅಂದುಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ!

CG ARUN

ಹಾಸಿಗೆ ಹಂಚಿಕೊಂಡರೇ ಸಿನಿಮಾದಲ್ಲಿ ಚಾನ್ಸು ಕೊಡ್ತೀನಿ!

Previous article

ಕೌರವೇಂದ್ರನ ಕಲರ್ ಫುಲ್ ಎಂಟ್ರಿ!

Next article

You may also like

Comments

Leave a reply

Your email address will not be published. Required fields are marked *