ಎಮ್ ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರದ ಜ್ಯೂಕ್ ಬಾಕ್ಸ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಈ ಜ್ಯೂಕ್ ಬಾಕ್ಸ್ ಮೂಲಕ ಹತ್ತು ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಾ ಜನ ಸಂಭ್ರಮಿಸುತ್ತಿದ್ದಾರೆ. ಅದಾಗಲೇ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಸ್ಫೂರ್ತಿಯಿಂದ ಮತ್ತೊಂದು ಹಾಡನ್ನು ನಿರ್ದೇಶಕ ಗುರು ದೇಶಪಾಂಡೆ ರೂಪಿಸಿದ್ದಾರೆ.
ಐಪಿಎಲ್ ನ ಮೊದಲ ದಿನದ ಪಂದ್ಯಾಟದಲ್ಲಿ ನೆಲ ಕಚ್ಚಿದ ಆರ್ಸಿಬಿಗೂ ಲವ್ವಿಗೂ ಕನೆಕ್ಷನ್ನು ಹೊಂದಿರುವ ಈ ವೀಡಿಯೋ ಹಾಡನ್ನು ಇದೀಗ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಹಂತ ಹಂತವಾಗಿ ಬಿಡುಗಡೆಯಾದ ಈ ಚಿತ್ರದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಇದೀಗ ಬಿಡುಗಡೆಯಾಗಿರೋ ವಿಶೇಷವಾದ ಈ ಹಾಡೂ ಕೂಡಾ ಆ ಸಾಲಿಗೆ ಸೇರಿಕೊಳ್ಳುವುದು ನಿಸ್ಸಂದೇಹ!
ಚೂರ್ ಚೂರಾಗಿದೆ ಅನ್ನೋ ಶೀರ್ಷಿಕೆ ಹೊಂದಿರುವ ಈ ಹಾಡು ಐಪಿಎಲ್ ಬರಲಿ ಆರ್ಸಿಬಿ ಬೀಳಲಿ ಈ ಸಲ ಲವ್ವಲ್ಲಿ ಕಪ್ ನಮ್ದೇ ಅನ್ನೋ ಆಕರ್ಷಕ ಸಾಲುಗಳನ್ನು ಹೊಂದಿದೆ. ಅಜಿನೀಶ್ ಲೋಕನಾಥ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿ.ಆರ್ ಬಾಬ್ಬಿ ಇದನ್ನು ಹಾಡಿದ್ದಾರೆ. ಈಗ ಹೊರ ಬಂದಿರೋ ಈ ವೀಡಿಯೋ ಹಾಡಲ್ಲಿ ನಾಯಕ ಶ್ರೇಯಸ್ ಯೂಥ್ ಐಕಾನ್ ಅನ್ನಿಸುವಂಥಾ ಆಕರ್ಷಕ ಸ್ಟೆಪ್ಸ್ ಹಾಕೋ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಈ ವೀಡಿಯೋ ಸಾಂಗಿಗೆ ನೃತ್ಯ ಸಂಯೋಜನೆ ಮಾಡಿರುವವರು ಜಾನಿ ಮಾಸ್ಟರ್. ಈಗಾಗಲೇ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಅಪ್ಪ ಡಾನ್ಸ್ ಮತ್ತು ನಟಸಾರ್ವಭೌಮದ ಓಪನ್ ದ ಬಾಟಲ್ ಹಾಡುಗಳಿಗೆ ಕೋರಿಯೋಗ್ರಫಿ ಮಾಡಿದ್ದವರು ಜಾನಿ ಮಾಸ್ಟರ್. ಪ್ರಭಾಸ್, ಅಲ್ಲು ಅರ್ಜುನ್ ಮುಂತಾದವರ ಚಿತ್ರಗಳಿಗೂ ನೃತ್ಯ ನಿರ್ದೇಶನ ಮಾಡಿರೋ ಜಾನಿ ಪಡ್ಡೆ ಹುಲಿ ಹಾಡನ್ನು ಮತ್ತಷ್ಟು ಆಕರ್ಷಕವಾಗಿದ್ದಾರೆ.
ಈ ಹಾಡೂ ಕೂಡಾ ಯುವ ಸಮುದಾಯದ ಹಾಟ್ ಫೇವರಿಟ್ ಆಗಿ ಸೂಪರ್ ಹಿಟ್ಟಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಅಂದಹಾಗೆ ಇದು ಪಡ್ಡೆ ಹುಲಿ ಚಿತ್ರದ ಹನ್ನೊಂದನೇ ಹಾಡು!
No Comment! Be the first one.