ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ಮದುವೆಯಾದ ಬಳಿಕ ಮೇಘನಾ ಒಂದು ವಿರಾಮ ತೆಗೆದುಕೊಂಡಿದ್ದರು. ಅವರು ಮತ್ತೆ ನಟನೆಗೆ ವಾಪಾಸಾಗುತ್ತಾರಾ ಅಥವಾ ಫ್ಯಾಮಿಲಿ ಲೈಫಲ್ಲಿ ಕಳೆದುಹೋಗಿ ಬಿಡುತ್ತಾರಾ ಎಂಬ ಅಭಿಮಾನಿಗಳ ಆತಂಕ ಈ ಚಿತ್ರದ ಮೂಲಕ ದೂರಾಗಿದೆ. ಒಂದರ್ಥದಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಭಿನ್ನವಾದೊಂದು ಪಾತ್ರದ ಮೂಲಕ ಅವರು ಭರ್ಜರಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ.
ದೇವರಾಜ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರವೂ ನಮ್ಮೊಳಗೆ ಉಳಿದು ಹೋಗಿರೋ ಯಾವುದೋ ಭಾವಗಳ ಪ್ರತಿಬಿಂಬದಂತೆ ರೂಪಿಸಲ್ಪಟ್ಟಿವೆ. ನಿರ್ದೇಶಕ ಕಾಂತ ಕನ್ನಲ್ಲಿ ರೂಪಿಸಿದ ಅಂಥಾದ್ದೇ ಒಂದು ಪಾತ್ರಕ್ಕೆ ಮೇಘನಾ ರಾಜ್ ಜೀವ ತುಂಬಿದ್ದಾರೆ. ಇದರಲ್ಲಿನ ಮೇಘನಾ ಫೋಟೋಗಳು ಈಗಾಗಲೇ ಸಖತ್ ಸೌಂಡು ಮಾಡಲಾರಂಭಿಸಿವೆ. ಇದರ ತುಂಬಾ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮೇಘನಾ ಅವರದ್ದಿಲ್ಲಿ ಕಾರ್ಪೋರೇಟ್ ವಲಯದ ಬೋಲ್ಡ್ ಪಾತ್ರವಂತೆ. ಅದೇ ವಲಯದ ತೊಳಲಾಟಗಳನ್ನು ಧ್ವನಿಸುವ ತಿಲಕ್ಗೆ ಜೋಡಿಯಾಗಿ ಮೇಘನಾ ಕಾಣಿಸಿಕೊಂಡಿದ್ದಾರೆ. ಮದುವೆ ಅಂದ್ರೆ ಮಾಡಲು ಕೆಲಸಿಲ್ಲದವರು ಮಾತ್ರವೇ ಮೈ ಮೇಲೆಳೆದುಕೊಳ್ಳೋ ದುರಂತ ಅಂದುಕೊಂಡಿರೋ ಈ ದೇವ್ ಪಾತ್ರದೊಂದಿಗಿನ ಲಿವಿನ್ ಸಂಬಂಧದ ಜೊತೆಗಾರ್ತಿಯಾಗಿ ಮೇಘನಾ ನಟಿಸಿದ್ದಾರೆ.
ಕಮರ್ಷಿಯಲ್ ಅಂಶಗಳಾಚೆಗೆ ಸೂಕ್ಷ್ಮ ವಿಚಾರದತ್ತ ಗಮನ ನೆಟ್ಟಿರುವ ಈ ಚಿತ್ರದ ತುಂಬಾ ಮೇಘನಾ ಹಾಟ್ ಆಗಿ ಕಾಣಿಸಿಕೊಂಡಿರೋ ಸೂಚನೆ ಫೋಟೋಗಳ ಮೂಲಕ ಈಗಾಗಲೇ ಜಾಹೀರಾಗಿದೆ. ಆದರೆ ಈ ಪಾತ್ರ ಭಾವುಕವಾಗಿಯೂ ಮೂಡಿ ಬಂದಿದೆಯಂತೆ. ಒಟ್ಟಾರೆಯಾಗಿ ಇದು ಚಾಲೆಂಜಿಂಗ್ ಪಾತ್ರ. ಅದನ್ನು ಶ್ರದ್ಧೆಯಿಂದಲೇ ನಿರ್ವಹಿಸಿರೋ ಮೇಘನಾ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗೋ ನಿರೀಕ್ಷೆ ಹೊಂದಿದ್ದಾರೆ.
#
No Comment! Be the first one.