ಥೇಟ್ ಕತ್ರಿನಾ ಕೈಫ್ ಅವರನ್ನೇ ಹೋಲುವ ತಂಗಿ ಇಸಬೆಲ್ಲಾ ಕ್ವಾಥಾ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿದ್ದು, ಭಾರತೀಯ ಸೇನೆಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಇನ್ನು ಇಸಬೆಲ್ಲಾ ಜೋಡಿಯಾಗಿ ಸಲ್ಮಾನ್ ಖಾನ್ ಸಂಬಂಧಿ ಆಯುಷ್ ಶರ್ಮಾ ನಟಲಿರುವುದು ವಿಶೇಷವಾಗಿದೆ. ಈಗಾಗಲೇ ಲೀ ಸ್ಟ್ರೆಸ್ ಬರ್ಗ್ ಥಿಯೇಟರ್ ಮತ್ತು ಫಿಲಂ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಾಲ್ಕು ವರ್ಷ ಟ್ರೇನಿಂಗ್ ಪಡೆದಿರುವ ಇಸಬೆಲ್ಲಾ ಡಾ. ಕ್ಯಾಬಿ ಸೇರಿದಂತೆ ಸಾಕಷ್ಟು ಕಿರು ಚಿತ್ರಗಳಲ್ಲಿಯೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕ್ವಾಥಾ ಚಿತ್ರವನ್ನು ಕರಣ್ ಲಲಿತ್ ಭೂತಾನಿ ನಿರ್ದೇಶನ ಮಾಡಲಿದ್ದು, ಸೆಪ್ಟೆಂಬರ್ನಲ್ಲಿ ಸೆಟ್ಟೇರಿ 2020ರಲ್ಲಿ ತೆರೆಕಾಣಲಿದೆ.
https://www.instagram.com/p/B0sMMYgBNww/?utm_source=ig_web_copy_link
ಬಾಲಿವುಡ್ಗೆ ಸಹೋದರಿ ಎಂಟ್ರಿ ನೀಡುತ್ತಿರುವ ಸುದ್ದಿಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಕತ್ರಿನಾ, ‘ಭಾರತೀಯ ಸೇನೆಯಲ್ಲಿ ನಡೆದ ನಿಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ಸಿನಿಮಾದಲ್ಲಿ ಇಸಬೆಲ್ಲಾ ಕೈಫ್ ಮತ್ತು ಆಯುಷ್ ಶರ್ಮ ನಟಿಸಲಿದ್ದಾರೆ’ ಎಂದು ಬರೆಯುವ ಮೂಲಕ ಅವರಿಬ್ಬರು ಜತೆಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.