ಸದ್ಯ ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ಕೊರಟಾಲ ಶಿವ ಅವರ ಸಿನಿಮಾದಲ್ಲಿ ನಟಿಸಲಿದ್ಧಾರೆ. ಈ ಚಿತ್ರಕ್ಕೆ ರಾಮ್ ಚರಣ್ ಹಾಗೂ ಮತ್ತೊಬ್ಬ ನಿರ್ಮಾಪಕರೊಬ್ಬರು ಬಂಡವಾಳವನ್ನು ಹೂಡಿದ್ದಾರೆ. ಸಿನಿಮಾಕ್ಕಾಗಿ ದೇಹವನ್ನು ಹುರಿಗೊಳಸಲಿರುವ ಚಿರಂಜೀವಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದಕ್ಕೂ ಯೋಜನೆ ಹಾಕಿಕೊಂಡಿದ್ದಾರೆ.

ಈ ಹೊಸ ಚಿತ್ರಕ್ಕೆ ನಾಯಕಿಯರ ಆಯ್ಕೆ ಭರದಿಂದ ಸಾಗುತ್ತಿದ್ದು, ನಯನತಾರಾ, ತಮನ್ನಾ, ಅನುಷ್ಕಾ ಹೆಸರು ಕೇಳಿಬರುತ್ತಿದ್ದರೂ ಸಹ ಕೊರಟಾಳ ಶಿವ ಯಾವ ನಟಿಯರನ್ನು ಫೈನಲ್ ಮಾಡಿಲ್ಲ. ನಿರ್ಮಾಪಕರು ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಅವರನ್ನು ಕರೆತರಲು ಪ್ಲ್ಯಾನ್ ಮಾಡಿಕೊಂಡಿದ್ದು, ಐಶ್ವರ್ಯಾ ಅವರ ಮ್ಯಾನೇಜರ್ ಜತೆಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.

CG ARUN

ರವಿ ತೇಜಾ ಜೋಡಿಯಾದ ಬಸಣ್ಣಿ ತಾನ್ಯಾ!

Previous article

ಆಗಸ್ಟ್ ಮೊದಲ ವಾರ ರಾಕ್ಷಸುಡು ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *