ಹೆಸರಾಂತ ನಟ ಅರ್ಜುನ್ ಸರ್ಜಾ ಹಾಗೂ ನಿವೇದಿತಾ ಸರ್ಜಾ ಅವರ ಪುತ್ರಿ ಚಿ|ಸೌ|ಐಶ್ವರ್ಯ ಅರ್ಜುನ್ ಅವರ ವಿವಾಹ ಮಹೋತ್ಸವ ಚಿ|ಉಮಾಪತಿ ರಾಮಯ್ಯ ಅವರೊಂದಿಗೆ(ಶಾಂತಿ ರಾಮಯ್ಯ ಹಾಗೂ ತಂಬಿ ರಾಮಯ್ಯ ಅವರ ಪುತ್ರ) ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಜೂನ್ ಹತ್ತರಂದು ಅದ್ದೂರಿಯಾಗಿ ನೆರವೇರಿತು.
ಜೂನ್ ಏಳರಂದು ಅರಿಶಿನ ಶಾಸ್ತ್ರದೊಂದಿಗೆ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ದೂರಿ ಸೆಟ್ ಹಾಕಿದ್ದರು. ಎರಡು ಕಟುಂಬದ ಬಂಧುಗಳು ಹಾಗೂ ಹತ್ತಿರದ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.
No Comment! Be the first one.