ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರು ತಮ್ಮ ಮಗಳು ಆರಾಧ್ಯಾ ಜತೆಗೆ ಕಾನ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ತನ್ನ ಅಮ್ಮನ ಕೈ ಹಿಡಿದು ಹೆಜ್ಜೆ ಹಾಕಿರುವ ಆರಾಧ್ಯಾ, ಅಲ್ಲಿ ಅಮ್ಮನ ಜೊತೆಗೆ ಎಲ್ಲರ ಕಣ್ಣಿಗೆ ಬಿದ್ದಿದ್ದಾಳೆ. ಈಗಾಗಲೇ ನಟಿ ಐಶ್ವರ್ಯಾ ರೈ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿ ಹವಾ ಸೃಷ್ಟಿ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಗಳ ಕೈ ಹಿಡಿದು ನಟಿ ಐಶ್ವರ್ಯಾ ರೈ ಮತ್ಸ್ಯ ಕನ್ಯೆ ವೇಷದಲ್ಲಿ ಹೆಜ್ಜೆ ಹಾಕಿರುವುದು ಜಾಗತಿಕ ಮನ್ನಣೆಯನ್ನು ಗಳಿಸಿದೆ.
https://www.instagram.com/p/BxprvcVBF5G/?utm_source=ig_web_copy_link
ಕೆಂಪು ಹಾಸಿನ ಮೇಲೆ ಮತ್ಸ್ಯಕನ್ಯೆಯಂತೆ ಕಂಗೊಳಿಸಿದ ನಟಿ ಐಶ್ವರ್ಯಾ ರೈ ಅವರು ಚೆಂದದ ಬಣ್ಣ ಬಣ್ಣದ ಉಡುಗೆಯಲ್ಲಿ ಮಿರಮಿರ ಮಿಂಚುತ್ತಿದ್ದರು. ತುಟಿಗೆ ಗಾಢ ಕೆಂಪು ಬಣ್ಣವನ್ನು ಹಚ್ಚಿದ್ದ ಐಶೂ, ತಮ್ಮ ಕೂದಲನ್ನು ನೇರವಾಗಿ ಇಳಿಬಿಟ್ಟು, ಮೀನಿನ ಹೆಜ್ಜೆಯಂತೆ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದರೆ, ಎಂಥವರ ಉಸಿರಾಟವೂ ಕೊಂಚ ಹೆಚ್ಚು ವೇಗ ಪಡೆದುಕೊಳ್ಳುವುದು ಗ್ಯಾರಂಟಿ ಎಂಬಂತಿತ್ತು. ಇನ್ನು ಮರಿ ಮೀನಿನಂತೆ ಮಗಳು ಆರಾಧ್ಯಾ ಅಮ್ಮನ ಜೊತೆ ಹೆಜ್ಜೆ ಹಾಕುತ್ತಿದ್ದಳು.
No Comment! Be the first one.