ಒಂದಲ್ಲ ಒಂದು ವಿಚಾರಕ್ಕೆ ಸೆಲೆಬ್ರೆಟಿಗಳು ಟ್ರೋಲಿಗೆ ಒಳಗಾಗುವುದು ಈಗೀಗ ಕಾಮನ್ನಾಗಿಬಿಟ್ಟಿದೆ. ಹಾಗೆ ನೋಡಿದರೆ ಸೆಲೆಬ್ರೆಟಿಗಳಾಗಿ ಪಬ್ಲಿಕ್ ಫಿಗರ್ ಆದಮೇಲಂತೂ ಖಾಸಗಿ ವಿಚಾರಗಳೂ ಪಬ್ಲಿಕ್ ಆಗುವ ಮೂಲಕ ಅನೇಕ ಸಂದರ್ಭಗಳಲ್ಲಿ ತಲೆ ತಗ್ಗಿಸುವಂತಹ ಸಂಗತಿಗಳಿಗೆ ಸೆಲೆಬ್ರೆಟಿಗಳು ಬಲಿಯಾಗಲೇ ಬೇಕಾಗುತ್ತದೆ. ಹೀಗೆ ಬಹಳಷ್ಟು ಬಾರಿ, ಚಿಕ್ಕ ಚಿಕ್ಕ ವಿಚಾರಗಳಿಗೆ ಟ್ರೋಲಿಗೆ ಒಳಗಾಗುವವರ ಪೈಕಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಒಬ್ಬರು.
ಇತ್ತೀಚಿಗೆ ಐಶ್ವರ್ಯ ರೈ ಮತ್ತು ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯಾ ಜೊತೆಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮುಗಿಸಿ ಬರುವಾಗ ಮಗಳ ಕೈ ಜತೆಗೆ ಕುತ್ತಿಗೆಯನ್ನೂ ಹಿಡಿದುಕೊಂಡು ಹೊರಬರುತ್ತಿರುವ ಪೋಟೋವೇ ಇದೀಗ ಟ್ರೋಲ್ ಗೆ ಒಳಗಾಗಿರುವುದು. “ಪಾಪ ಆರಾಧ್ಯಳನ್ನು ನಡೆಯಲು ಬಿಡಿ. ಸದಾ ಕಾಲ ಹಾಗೆ ಹಿಡಿದುಕೊಂಡರೆ ಅವಳಿಗೆ ಕುತ್ತಿಗೆ ನೋವು ಬರಬಹುದೆಂದು” ಟ್ರೋಲಿಗರು ಕಮೆಂಟಿನ ಸುರಿಮಳೆಯನ್ನೇ ಗೈದಿದ್ದಾರೆ.