ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ  “ಇಸ್ಮಾರ್ಟ್ ಜೋಡಿ”‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು,  ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ.

ಇಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ. ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು. ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು, ನೀವೇ ಇದನ್ನು ನಡೆಸಿಕೊಡಬೇಕು ಎಂದರು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಆರಂಭಿಕ ಎರಡು ಕಂತುಗಳ ಚಿತ್ರೀಕರಣ ನಡೆದಿದೆ.  ಈಗ ಇನ್ನೆರೆಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ.

ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದರು ಗಣೇಶ್.

ನಿರ್ದೇಶಕ ಪ್ರಶಾಂತ್​, ವರ್ಷ, ಉಷಾ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ರಾಕ್​ಲೈನ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ಭುತ  ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ.  ಶೀರ್ಷಿಕೆ ಹಾಡಿಗೆ ALL OK ಸಂಗೀತ ಸಂಯೋಜನೆ ಮಾಡಿ ಅವರೆ ಹಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಈ ಹಾಡು ಜನರ ಮನ ಗೆದ್ದಿದೆ.

 “ಇಸ್ಮಾರ್ಟ್ ಜೋಡಿ” ಯಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿ ಜೋಡಿಗಳು

ವಿನಯ್​ ಗೌಡ ಮತ್ತು ಅಕ್ಷತಾ ಗೌಡ,

ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ,

ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​,

ಪ್ರತಿಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ,

ಶ್ರೀರಾಮ ಸುಳ್ಯ ಮತ್ತು ಪುನೀತ ಆಚಾರ್ಯ,

ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ,

ಇಂಪನಾ ಜಯರಾಜ್​ ಮತ್ತು ಅಜಿತ್​  ಜಯರಾಜ್​,

ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​,ಜೈಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​ .

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಆಫರ್ ಕಡಿಮೆಯಾಗಿಲ್ಲ… ಆದರೆ, ಇಷ್ಟವಾದ ಕಂಟೆಂಟ್ ಸಿಗುತ್ತಿರಲಿಲ್ಲ!

Previous article

ಏನಿದು NFT? ಹೇಗೆ ಕೆಲಸ ಮಾಡುತ್ತದೆ?

Next article

You may also like

Comments

Comments are closed.