ಕನ್ನಡ ಕಿರುತೆರೆ ಲೋಕಕ್ಕೆ ಬಹುತೇಕ ಯಶಸ್ವಿ ಧಾರವಾಹಿಗಳನ್ನು ಕಲರ್ಸ್ ಕನ್ನಡ ನೀಡುತ್ತಾ ಬರುತ್ತಿದೆ. ಇದೀಗ ಇಷ್ಟದೇವತೆ ಎಂಬ ಮತ್ತೊಂದು ಧಾರಾವಾಹಿಯನ್ನು ಮೇ 27 ನಿನ್ನೆಯಿಂದ ರಾತ್ರಿ 9.30ಕ್ಕೆ ಆರಂಭಿಸಿದೆ.ಮಗಳಲ್ಲಿ ಭರತ ನಾಟ್ಯದ ಕನಸನ್ನು ಬಿತ್ತಿ ತೀರಿಹೋದ ತಂದೆಯ ಆಸೆಯನ್ನು ತಾಯಿ ಕೈಲಾದಷ್ಟು ಮಟ್ಟಿಗೆ ಪೋಷಿಸಿ ಬೆಳೆಸುತ್ತಿರುತ್ತಾರೆ. ಅವರಿಬ್ಬರ ಆಸೆಯನ್ನು ಪೂರೈಸಲು ಭರತನಾಟ್ಯವನ್ನೇ ಬದುಕಾಗಿಸಿಕೊಂಡ ಮಗಳಿಗೆ ನೃತ್ಯದ ಹೊರತು ಬೇರೆ ಜೀವನವೇ ಇಲ್ಲ. ಇದು ಕಥಾ ನಾಯಕಿಯ ವಿಚಾರವಾದರೆ,
ಯಾವುದೋ ಅವಗಡದಲ್ಲಿ ತಂದೆಯನ್ನು ಕಳೆದುಕೊಂಡಿದ್ದರೂ ಕುಟುಂಬದ ವಾತ್ಸಲ್ಯದಲ್ಲಿ ಸುಖವಾಗಿ ಬೆಳೆದ ನಾಯಕ ತನ್ನ ತಂದೆ ಕಟ್ಟಿಸಿದ ಪುಡ್ ಇಂಡಸ್ಟ್ರಿಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾನೆ. ಅವರದೇ ಆದ ಹೊಣೆಗಾರಿಕೆಯಲ್ಲಿ ಸಾಗುವ ನಾಯಕ ನಾಯಕಿ ಸನ್ನಿವೇಶದ ತಕರಾರಿಗೆ ಕಟ್ಟುಬಿದ್ದು ಒಂದಾಗುತ್ತಾರೆ. ನಾಯಕಿ ನಾಸ್ತಿಕಳಾದರೆ, ನಾಯಕ ಬಹುದೊಡ್ಡ ಆಸ್ತಿಕ. ಶ್ರೀರಾಮ್ ಕಂಪನಿಯಲ್ಲಿ ಕೋಟಿಗಟ್ಟಲೆ ಲಾಭಕ್ಕಾಗಿ ತಯಾರಾಗುವ ಫುಡ್ ಪ್ರಾಡಕ್ಟ್ ಗಳನ್ನೇ ತನ್ನ ಅಂಗಡಿಯಲ್ಲಿ ಮಾರುತ್ತಾ ಜೀವನ ಸಾಗಿಸುತ್ತಾಳೆ. ಉತ್ತರ ಧ್ರುವ- ದಕ್ಷಿಣ ಧ್ರುವಗಳಂತಿರುವ ಈ ಎರಡು ಜೀವಗಳನ್ನು ವಿಧಿ ಹೇಗೆ ಬೆಸೆಯುತ್ತದೆ? ವೈದೇಹಿ ಹೇಗೆ ಶ್ರೀರಾಮ್ ಇಷ್ಟದೇವತೆ ಆಗುತ್ತಾಳೆ? ಎಂಬುದು ಧಾರಾವಾಹಿಯ ಒಂದೆಳೆ.
ಇಲ್ಲಿಯವರೆಗೂ ನಾಯಕಿಯಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿರುವ ಪುಟ್ಟ ಗೌರಿ ಉರುಫ್ ರಂಜನಿ ರಾಘವನ್ ಇಷ್ಟದೇವತೆಯ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಈ ಧಾರವಾಹಿಗೆ ಕಥೆ, ಚಿತ್ರಕಥೆ ಬರೆದು ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಲೈಮ್ ಲೈಟ್ ಪ್ರೊಡಕ್ಷನ್ಸ್ ಮತ್ತು ಕಥೆ ಸ್ಟುಡಿಯೋ ಸಹಯೋಗದಲ್ಲಿ ಇಷ್ಟದೇವತೆ ಮೂಡಿಬರುತ್ತಿದೆ. ಪೃಥ್ವಿರಾಜ್ ಕುಲಕರ್ಣಿ ಇಷ್ಟದೇವತೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಇಷ್ಟದೇವತೆಯ ಟೈಟಲ್ ಸಾಂಗನ್ನು ಎವರ್ ಗ್ರೀನ್ ಸಿಂಗರ್ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಾಯಕಿಯ ತಾಯಿ ಪಾತ್ರವನ್ನು ನೀ ಬರೆದ ಕಾದಂಬರಿ ಖ್ಯಾತಿಯ ಭವ್ಯಾ ನಿಭಾಯಿಸಿದ್ದು, ನಾಯಕನಾಗಿ ಶ್ರೀ ಮಹದೇವ್, ಕಥಾ ನಾಯಕಿಯಾಗಿ ರಾಶಿ ಅಭಿನಯಿಸಿದ್ದಾರೆ.
No Comment! Be the first one.