ಸಾಮಾನ್ಯವಾಗಿ ಸಿನಿಮಾ ಮಂದಿ ತೀರಾ ದ್ವೇಷಿಸುವ ಸಂಸ್ಥೆ ಯಾವುದಾದರೂ ಇದೆ ಅಂದ್ರೆ ಅದು ಸೆನ್ಸಾರ್ ಮಾತ್ರ. ಯಾಕಂದರೆ ಸಿನಿಮಾವನ್ನು ಒಂದು ಮಟ್ಟಿಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಟ್ಟಿಕೊಟ್ಟ ಮಂದಿಗೆ ಸೆನ್ಸಾರ್ ಹಾಕುವ ಬರೆ ಸಿನಿಮಾ ಬಿಡುಗಡೆಯಾದ ಮೇಲೆ ವಾಸಿಯಾಗಿರುವುದಿಲ್ಲ. ಕೆಲವೊಮ್ಮೆ ಬೇಕಂತಲೇ ಕತ್ತರಿ ಪ್ರಯೋಗ ಮಾಡಿ ಸಿನಿಮಾದ ಅಂದ ಗೆಡಿಸಿ ಚಿತ್ರ ನಿರ್ಮಾಪಕರ ಶಾಪಕ್ಕೂ ಸೆನ್ಸಾರ್ ತುತ್ತಾಗಿಬಿಡುತ್ತದೆ. ಜಬಾರಿಯಾ ಜೋಡಿ ಚಿತ್ರತಂಡವೂ ಸೆನ್ಸಾರ್ ಮೇಲೆ ಶಾಪದ ಸುರಿಮಳೆಯನ್ನೇ ಸುರಿಸುವ ಮಟ್ಟಿಗೆ ಸೆನ್ಸಾರ್ ಕೆಂಗಣ್ಣು ಜಬಾರಿಯಾ ಜೋಡಿ ಚಿತ್ರದ ಮೇಲೆ ಬಿದ್ದಿದೆ.
ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಮತ್ತು ಸಿದ್ಧಾರ್ಥ ಮಲ್ಲೋತ್ರಾ ಅಭಿನಯಿಸಿದ್ದು, ಪ್ರಶಾಂತ್ ಸ ಸಿಂಗ್ ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರವು ತೆರೆಗೆ ಬಂದರೂ ಸಹ ಚಿತ್ರತಂಡದಲ್ಲಿ ಅಷ್ಟೇನು ಸಂತಸವೇ ಇಲ್ಲವಾಗಿದೆ. ಯಾಕೆಂದರೆ ಸಿನಿಮಾದಲ್ಲಿ ಬಹಳಸಿರುವ ಲೆಕ್ಕಕ್ಕೆ ಸಿಗದಷ್ಟು ಪದಗಳನ್ನು ಸೆನ್ಸಾರ್ ಕೈ ಬಿಡಲು ತಿಳಿಸಿದ್ದು, ಬೈಗುಳಗಳನ್ನು ತಮಗೆ ಬೇಕಂತೆ ಬಳಸಿಕೊಂಡಿದ್ದ ಚಿತ್ರತಂಡಕ್ಕೆ ಸೆನ್ಸಾರ್ ಶಾಕ್ ನೀಡಿದೆ. ಪ್ರಮುಖವಾಗಿ ನಿನಗೆ ಕನ್ಯೆ ಹುಡುಕಿ, ನಿನ್ನ ಬಲಗೈ ಕೆಲಸ ಕಡಿಮೆ ಮಾಡಿದ್ದೇನೆ ಎಂದು ಹಸ್ತಮೈಥುನದ ಕುರಿತು ಪರೋಕ್ಷವಾಗಿ ತಿಳಿಸಿದ್ದ ವಾಕ್ಯವನ್ನು ಕಟ್ ಮಾಡಲಾಗಿದೆ. ಬಿಹಾರದ ಪ್ರದೇಶವೊಂದರಲ್ಲಿ ಕಜಾರಿಯಲ್ಲಿರುವಂಥ ವಧುಗಳನ್ನು ಅಪಹರಿಸಿ ಮದುವೆಗೆ ಒತ್ತಡ ಹೇರುವಂತಹ ಘಟನೆಗಳನ್ನು ಆಧರಿಸಿದ ಕಥೆಯೇ ಜಬಾರಿಯಾ ಜೋಡಿ.
No Comment! Be the first one.