ಬಾಲಿವುಡ್ ನ ಚಲನಚಿತ್ರೋದ್ಯಮದ ಹೆಚ್ಚು ಜನಪ್ರಿಯ ಮತ್ತು ಡಿಮ್ಯಾಂಡ್ ನಟಿಯರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಒಬ್ಬರು. ಶ್ರೀಲಂಕಾದ ಈ ಬ್ಯೂಟಿ 2009ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೂ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಜಾಕ್ವೆಲಿನ್ ಸೋಶಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಸಕ್ರಿಯರಾಗಿದ್ದಾರೆ.
https://www.instagram.com/p/B08mvb9Hc-g/?utm_source=ig_web_copy_link
ತಮ್ಮ ಅದ್ಭುತ ನಟನೆಯ ಜತೆಗೆ ತನ್ನ ಬ್ಯೂಟಿಯಿಂದಲೂ ಪಡ್ಡೆ ಹೈಕಳ ನಿದ್ದೆಗೆಡಿಸಿರುವ ಈ ನಟಿ ಇತ್ತೀಚಿಗಷ್ಟೇ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಫೋಟೋದಲ್ಲಿ ಕಡಲ ಕಿನಾರೆಯಲ್ಲಿ ನಿಂತು ಫೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಕ್ಯಾಮಿ ಟಾಪ್ ಧರಿಸಿರುವ ಜಾಕ್ವೆಲಿನ್ ಜೊತೆಗೆ ಕ್ರೀಮ್ ಬಣ್ಣದ ಪಲಾಜೋ ಧರಿಸಿದ್ದಾರೆ. ಆಕೆಯ ಮಾದಕ ಸೌಂದರ್ಯಕ್ಕೆ ಮನಸೋತಿರುವ ಅಭಿಮಾನಿಗಳು ಸಾಕಷ್ಟು ಕಮೆಂಟುಗಳ ಜತೆಗೆ ಲಕ್ಷಾಂತರ ಲೈಕುಗಳನ್ನು ನೀಡಿದ್ದಾರೆ.