ಜಗ್ಗೇಶ್ ಅಭಿನಯದ ೮ಎಂಎಂ ಚಿತ್ರ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ರಾಜ್ಯಾಧ್ಯಂತ ಈ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳೇ ಸಿಗುತ್ತಿವೆ. ಇದೆಲ್ಲದರಿಂದಾಗಿ ನವರಸನಾಯಕ ಜಗ್ಗೇಶ್ ಖುಷಿಗೊಂಡಿದ್ದಾರೆ. ತಮ್ಮ ಚಿತ್ರವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ.
ಮಾಧ್ಯಮದವರೂ ಸೇರಿದಂತೆ ೮ ಎಂಎಂ ಚಿತ್ರ ವೀಕ್ಷಿಸಿ ಒಳ್ಳೆ ಮಾತಾಡಿ ಪ್ರೋತ್ಸಾಹಿಸಿದ್ದರಿಂದ ಹೃದಯ ತುಂಬಿ ಬಂತು. ನಿಮ್ಮೆಲ್ಲರ ಹಾರೈಕೆಗಳಿಂಣದ ಈ ಚಿತ್ರಕ್ಕೆ ಆನೆಬಲ ಬಂದಂತಾಗಿದೆ. ಧನ್ಯವಾದಗಳು, ನಿಮ್ಮ ಹಾರೈಕೆಗಳಿಂದ ಹೃದಯ ತುಂಬಿ ಬಂದಿದೆ. ನನ್ನ ಈ ವರೆಗಿನ ಕಲಾ ಸೇವೆಯೂ ಇದರಿಂದಲೇ ಸಾರ್ಥಕವಾದಂತಾಗಿದೆ ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ಈ ಚಿತ್ರ ಯಶಸ್ಸಿನತ್ತ ಮುಂದುವರೆಯುತ್ತಿರೋದಕ್ಕೆ ಈ ಪಾಟಿ ಸಂಭ್ರಮಿಸಲೂ ಕಾರಣವಿದೆ. ಈ ಚಿತ್ರದಲ್ಲಿ ಅವರು ತಮ್ಮ ಇಮೇಜಿಗೆ ತದ್ವಿರುದ್ಧವಾದ ಪಾತ್ರ ಮಾಡಿದ್ದಾರೆ. ಇದೊಂದು ಬಾಂಡ್ ಶೈಲಿಯ ಚಿತ್ರ. ಜಗ್ಗೇಶ್ ಅವರದ್ದಿಲ್ಲಿ ಬೇರೆಯದ್ದೇ ಥರದ ಪಾತ್ರ. ಈ ಚಿತ್ರದ ಆರಂಭದಲ್ಲಿಯೇ ಜಗ್ಗೇಶ್ ತಾನು ಬೇರೆ ಥರದ ಪಾತ್ರಕ್ಕೆ ಜೀವ ತುಂಬುತ್ತಿರೋದರಿಂದ ಈ ಬದಲಾವಣೆಯನ್ನು ಒಪ್ಪಿಕೊಳ್ಳಿ ಅಂತ ಅಭಿಮಾನಿಗಳಲ್ಲಿ ಭಿನ್ನವಿಸಿಕೊಂಡಿದ್ದರು. ಅದರಂತೆಯೋ ರಸವತ್ತಾದ ಕಥೆ ಹೊಂದಿರೋ ಈ ಚಿತ್ರವನ್ನು ಮತ್ತು ಜಗ್ಗೇಶ್ ಅವರ ನಟನೆಯನ್ನು ಜನ ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಈವರೆಗಿನ ಇಮೇಜಿನಾಚೆಗೆ ಥರ ಥರದ ಪಾತ್ರ ಮಾಡ ಬೇಕೆಂಬ ಜಗ್ಗೇಶ್ ಅವರ ತುಡಿತಕ್ಕೆ ಜನ ಒಪ್ಪಿಗೆಯನ್ನೂ ನೀಡಿದ್ದಾರೆ.
#
No Comment! Be the first one.