ನವರಸನಾಯಕ ಜಗ್ಗೇಶ್ ದೈವ ಭಕ್ತಿ ಎಲ್ಲರಿಗೂ ಚಿರಪರಿಚಿತ. ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾದ ಅವರು ಇದೀಗ ತಮ್ಮ ಊರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ ನೀಡಿದ್ದಾರೆ. ಜಗ್ಗೇಶ್ ಅವರ ಊರಿನಲ್ಲಿದ್ದ ಈ ಕಾಲಭೈರವೇಶ್ವರ ದೇವಸ್ಥಾನ ಅದೆಷ್ಟೋ ವರ್ಷಗಳ ಇತಿಹಾಸ ಹೊಂದಿದೆ. ಆದರೆ ಅದೇಕೋ ಈ ದೇವಳ ಶಿಥಿಲಾವಸ್ಥೆ ತಲುಪಿ ಇನ್ನೇನು ಬಿದ್ದೇ ಹೋಗುವ ಹಂತದಲ್ಲಿತ್ತು. ಇದು ಮುಂಚೆ ಇದ್ದ ಸ್ಥಿತಿ ಮತ್ತು ತಾವೇ ಮುಂದೆ ನಿಂತು ಅದಕ್ಕೆ ಮರು ರೂಪ ನೀಡಿದ ಫೋಟೋಗಳ ಮೂಲಕವೇ ಇಂಥಾದ್ದೊಂದು ಖುಷಿಯ ವಿಚಾರವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
‘ಹೀಗಿದ್ದ ನನ್ನೂರಿನ ಕಾಲಭೈರವೇಶ್ವರ ದೇವಸ್ಥಾನ ಹೀಗಾಯಿತು. ಧನ್ಯೋಸ್ಮಿ, ನನ್ನಂಥಾ ಪಾಮರನ ಕೈಲಿ ಇಂಥಾ ಕೆಲಸ ಮಾಡಿಸಿದ ದೈವಕ್ಕೆ. ತಾತಂದಿರು ಮತ್ತು ತಂದೆ ತಾಯಿ ಆತ್ಮಕ್ಕೆ ಶಾಂತಿ ಸಮಾಧಾನ ಸಂತೋಷ ನೀಡುವಲ್ಲಿ ಅವರ ಮಗನಾಗಿ ಸಾರ್ಥಕವಾಯ್ತು ನನ್ನ ಬದುಕು. ಈ ಕಾರ್ಯಕ್ಕೆ ನನ್ನ ಕಲಾ ಕರ್ತವ್ಯದ ದುಡಿಮೆ ಹಾಗೂ ಕಲಾಭಿಮಾನಿಗಳ ಚಪ್ಪಾಳೆ ಕಾರಣ’ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
#
No Comment! Be the first one.