ಸ್ಯಾಂಡಲ್ ವುಡ್ ನಲ್ಲಿ ಪೊಲೀಸ್ ಅಂದ್ರೆ ಸಾಯಿಕುಮಾರ್ ಎಂದು ನೆನಪಾಗುವ ಕಾಲವೊಂದಿತ್ತು. ಪೊಲೀಸ್ ಸ್ಟೋರಿ , ಅಗ್ನಿ ಐ ಪಿ ಎಸ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿ, ಪೊಲೀಸ್ ಪಾತ್ರಕ್ಕೆ ವ್ಯಾಲ್ಯೂ ತಂದುಕೊಟ್ಟಿದ್ದ ಸಾಯಿ ಕುಮಾರ್ ಬಹುಭಾಷೆಗಳ ಜತೆಗೆ ಬಹುರೂಪದಲ್ಲಿಯೂ ಕಾಣಿಸಿಕೊಂಡು ಸಕಲ ಪಾತ್ರಗಳನ್ನೂ ತಾನು ಮಾಡಬಲ್ಲೆನೆಂದು ತೋರಿಸಿಕೊಟ್ಟವರು. ಸದ್ಯ ಓಂ ಸಾಯಿ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ರೊಮ್ಯಾಂಟಿಕ್, ಆ್ಯಕ್ಷನ್ ಸಿನಿಮಾ ಜಗ್ಗಿಜಗನ್ನಾಥ್ ದಲ್ಲಿ ಮತ್ತೊಮ್ಮೆ ಸಾಯಿಕುಮಾರ್ ಅದೇ ಪೊಲೀಸ್ ಸ್ಟೈಲ್, ತಮ್ಮ ಖಡಕ್ ಡೈಲಾಗ್ ಮೂಲಕ ಮಿಂಚಲಿದ್ದಾರೆ. ಇತ್ತೀಚಿಗಷ್ಟೇ ಜಗ್ಗಿ ಜಗನ್ನಾಥ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲೂ ಸಾಯಿಕುಮಾರ್ ಅವರ ಲುಕ್ಕನ್ನು ಸವಿಯಬಹುದಾಗಿದೆ.
ಜಗ್ಗಿ ಜಗನ್ನಾಥ್ ಚಿತ್ರವನ್ನು ಶ್ರೀ ಮೈಲಾರ ಲಿಂಗೇಶ್ವರ ಮೂವಿ ಬ್ಯಾನರ್ ನಲ್ಲಿ ಹೆಚ್ ಜಯರಾಜು, ಜಿ ಶಾರದಾ ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಎ.ಎಂ. ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಚಿತ್ರಕ್ಕಿದೆ. ಚಿತ್ರದ ತಾರಾಂಗಣದಲ್ಲಿ ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿ ಕುಮಾರ್ ಸೇರಿದಂತೆ ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಈ ತಿಂಗಳಾಂತ್ಯ ಅಥವಾ ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
No Comment! Be the first one.