ಸೆಂಟಿಮೆಂಟ್ ಚಿತ್ರಗಳಿಗೆ ಫೇಮಸ್ ಆಗಿರುವ ಓಂ ಸಾಯಿ ಪ್ರಕಾಶ್ ಸದ್ಯ ಪಕ್ಕಾ ಆ್ಯಕ್ಷನ್, ಲವ್, ಕಮರ್ಷಿಯಲ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಕನ್ನಡದ ಎಲ್ಲ ಸೂಪರ್ ಸ್ಟಾರ್ ಚಿತ್ರಗಳಿಗೂ ಆ್ಯಕ್ಷನ್ ಕಟ್ ಹೇಳಿರುವ ಸಾಯಿ ಪ್ರಕಾಶ್ ‍ಈಗ ಲಿಖಿತ್ ರಾಜ್ ಎಂಬ ಹೊಸ ಪ್ರತಿಭೆಯನ್ನು ಸ್ಯಾಂಡಲ್ ವುಡ್ ಗೆ ಲಾಂಚ್ ಮಾಡಲಿದ್ದಾರೆ. ಚಿತ್ರಕ್ಕೆ ಜಗ್ಗಿ ಜಗನ್ನಾಥ್ ಎಂದು ಟೈಟಲ್ಲಿಟ್ಟಿದ್ದು, ಚಿತ್ರತಂಡ ಸದ್ದಿಲ್ಲದೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಪ್ರಥಮ ಪ್ರತಿಯನ್ನು ರೆಡಿಮಾಡಿಕೊಂಡಿದೆ. ಪೇಪರ್ ಆರಿಸುವ ಸಾಮಾನ್ಯ ಯುವಕನೊಬ್ಬ ಅಘೋರಿಯಾದ ನೈಜ ಘಟನೆಯಾದಾರಿತ ಜಗ್ಗಿ ಜಗನ್ನಾಥ್ ಚಿತ್ರವನ್ನು ರೆಡಿ ಮಾಡಲಾಗಿದೆಯಂತೆ.

ಜಗ್ಗಿ ಜಗನ್ನಾಥ್ ಚಿತ್ರವನ್ನು ಶ್ರೀ ಮೈಲಾರ ಲಿಂಗೇಶ್ವರ ಮೂವಿ ಬ್ಯಾನರ್ ನಲ್ಲಿ ಹೆಚ್ ಜಯರಾಜು, ಜಿ ಶಾರದಾ ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಎ.ಎಂ. ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ  ಚಿತ್ರಕ್ಕಿದೆ. ಚಿತ್ರದ ತಾರಾಂಗಣದಲ್ಲಿ ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿ ಕುಮಾರ್ ಸೇರಿದಂತೆ ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಅಭಿನಯಿಸಿದ್ದಾರೆ.

CG ARUN

ಸಿಂಗನಿಗೂ ತಟ್ಟಿದ ಪೈರಸಿ ಭೂತ!

Previous article

ಶ್ರದ್ಧಾ ಕಪೂರ್ ಗೆ ಡೆಂಗ್ಯೂ ಫೀವರ್!

Next article

You may also like

Comments

Leave a reply

Your email address will not be published. Required fields are marked *