ಮೋಹಕ ತಾರೆ ಲೇಟ್ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಈಗಾಗಲೇ ಚೊಚ್ಚಲ ಬಾರಿಗೆ ಧಡಕ್ ಸಿನಿಮಾದಿಂದ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿ ಪಡೆದಿರುವ ಅವರು ತಾಯಿಯಂತೆ ಮಗಳೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಧಡಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಕಮಾಲು ಮಾಡದಿದ್ದರೂ ಸಹ ಬಿಟೌನ್ ನಲ್ಲಿ ಜಾಹ್ನವಿ ತಾಯಿಯ ಪ್ರಭಾವದಿಂದ ಹಾಗೂ ಒಂದಿಲ್ಲೊಂದು ವಿಚಾರಕ್ಕೆ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
https://www.instagram.com/p/Byw6vrzHt4S/?utm_source=ig_web_copy_link
ಸದ್ಯ ತುಂಡುಗೆಯ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಟ್ರೋಲಿಗರ ಕೆಂಗಣ್ಣಿಗೂ ಗುರಿಯಾಗಿದೆ. ಅವ್ಯಾವುದಕ್ಕೂ ಕೇರ್ ಮಾಡದ ಜಾಹ್ನವಿ ಕರಣ್ ಜೋಹರ್ ಅವರ ತಕ್ತ್ ಹಾಗೂ ಗುಂಜನ್ ಸಕ್ಸೇನಾ ಬಯೋಪಿಕ್ ಗೆ ರೆಡಿಯಾಗುತ್ತಿದ್ದಾರೆ.
Comments