ಇತ್ತೀಚಿಗೆ ಸಿನಿಮಾ ಮಂದಿ ಮದುವೆಗೂ ಮುಂಚೆಯೇ ಪ್ರೆಗ್ನೆಂಟ್ ಆಗೋದು ಟ್ರೆಂಡ್ ಆಗಿ ಹೋಗಿದೆ. ಶಾಕಿಂಗ್ ವಿಚಾರ ಅಂದ್ರೆ ಆ ವಿಚಾರವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಾಧನೆಯ ಕುರಿತು ಸುದ್ದಿಯನ್ನೂ ಶೇರ್ ಮಾಡುತ್ತಾರೆ. ನಾವೆಷ್ಟರಮಟ್ಟಿಗೆ ಅಧೋಗತಿಗೆ ಇಳಿದಿದ್ದೇವೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ. ಈ ಹಿಂದೆ ವಿಲನ್ ಖ್ಯಾತಿಯ ಆ್ಯಮಿ ಜಾಕ್ಸನ್ ಮದುವೆಗೂ ಮುಂಚೆ ಗರ್ಭವತಿಯಾಗಿ ತಮ್ಮ ಬೇಬಿ ಬಂಪ್ ನ ಪೋಟೋವೊಂದಕ್ಕೆ ಫೋಸ್ ಕೊಟ್ಟು, ಟ್ರೋಲಿಗರ ಬೈಗುಳಕ್ಕೆ ತುತ್ತಾಗಿದ್ದರು. ಅದಾದ ಮೇಲೆ ಆಕೆ ತನ್ನ ಗರ್ಭಕ್ಕೆ ಕಾರಣನಾದವರನ್ನು ಎಂಗೇಜ್ ಮೆಂಟ್ ಮಾಡಿಕೊಂಡದ್ದು ಬೇಡದ ವಿಚಾರ ಬಿಡಿ.

ಸದ್ಯ ಜೈ ಹೋ ಚಿತ್ರದ ನಾಯಕಿ ಬ್ರೂನಾ ಅಬ್ದುಲ್ಲಾ ಸಹ ಅದೇ ದಾರಿಯಲ್ಲಿದ್ದು, ಅಂದಾಜು ಮೂರು ವರ್ಷಗಳಿಂದಲೂ ತಮ್ಮ ಬಾಯ್ ಫ್ರೆಂಡ್ ಅಲನ್ ಪ್ರೇಸರ್ ಜತೆಗೆ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಈಕೆ ಸದ್ಯ ತಾಯಿಯಾಗಿದ್ದಾರಂತೆ. ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಬ್ರೂನಾ, ತಾನು ಗರ್ಭವತಿಯಾದ ಕುರಿತಾಗಿ ವಿಷಯ ಪ್ರಸ್ಥಾಪ ಮಾಡಿದ್ದಲ್ಲದೇ, ತನ್ನ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

CG ARUN

ಬಸಣ್ಣಿಗೆ ಸ್ಯಾಂಡಲ್ ವುಡ್ ನಲ್ಲಿ ಉಳಿಯುವ ತವಕವಂತೆ!

Previous article

ಕಾಳಿ ಅವತಾರದಲ್ಲಿ ಭಾವನಾ!

Next article

You may also like

Comments

Leave a reply

Your email address will not be published. Required fields are marked *