ಈಗಾಗಲೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ತಲೈವಿ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಆಗ್ತೀರೋದು ಅಭಿಮಾನಿಗಳಲ್ಲಿ ಸಾಕಷ್ಟು ಕೌತುಕತೆಯನ್ನು ಸೃಷ್ಟಿಸಿದೆ. ಬಾಲಿವುಡ್ ಹಾಟ್ ಬ್ಯೂಟಿ ಕಂಗನಾ ರಣಾವತ್ ತಲೈವಿ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ಅಭಿಮಾನಿಗಳನ್ನು ಮತ್ತಷ್ಟು ಬೆರಗಾಗುವಂತೆ ಮಾಡಿತ್ತು.
ತಲೈವಿ ಬದುಕನ್ನು ಸಿಲ್ವರ್ ಸ್ಕ್ರೀನ್ ಗೆ ಉತ್ತಮ ಗುಣಮಟ್ಟದಲ್ಲಿ ತರಲು ಸಾಕಷ್ಟು ನಿರ್ಮಾಪಕರು ಸಿದ್ಧರಿದ್ದು, ನೂರರ ಗಟಿ ದಾಟಿದರೂ ಬಂಡವಾಳ ಹೂಡಲು ರೆಡಿಯಿದ್ದಾರಂತೆ. ಸದ್ಯ ಎನ್ ಟಿ ಆರ್ ಬಯೋಪಿಕ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದ ವಿಷ್ಣು ಇಂದೂರಿ ತಲೈವಿಗೆ ಬಂಡವಾಳ ಹೂಡಲಿರುವುದು ನಿಕ್ಕಿಯಾಗಿದೆ. ಸಿನಿಮಾದಲ್ಲಿ ಕಂಗನಾ ಲುಕ್ ಥೇಟ್ ಜಯಲಲಿತಾ ಅವರಂತೆಯೇ ಇರಬೇಕೆಂಬುದು ನಿರ್ಮಾಪಕರ ಹೆಬ್ಬಯಕೆಯಾಗಿದ್ದು, ಹಾಲಿವುಡ್ ಮೇಕಪ್ ಕಲಾವಿದರನ್ನು ಕರೆಸಲಾಗುತ್ತಿದೆಯಂತೆ. ಅದರ ಸಲುವಾಗಿ ಕೊಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆಯಂತೆ. ಇನ್ನುಳಿದ ತಾಂತ್ರಿಕ ವಿಭಾಗಗಳಿಗೂ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಇನ್ನು ತಲೈವಿಗೆ ಎ.ಎಲ್. ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನೀರವ್ ಶಾ ಛಾಯಾಗ್ರಹಣ ಮಾಡಲಿದ್ದಾರೆ. ರಾಜಕೀಯದ ಹೊರತಾಗಿ ಬಣ್ಣದ ಲೋಕದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದ ಜಯಲಲಿತಾ ಅವರ ಬದುಕು ಸದ್ಯದಲ್ಲಿಯೇ ಅನಾವರಣಗೊಳ್ಳಲಿದೆ. ಜೀವನದುದ್ದಕ್ಕೂ ರಾಯಲ್ ಆಗಿಯೇ ಬದುಕಿದ ಜಯಲಲಿತಾ ಅವರ ಬಯೋಪಿಕ್ ಸಹ ಅಷ್ಟೇ ರಾಯಲ್ ಆಗಿರಬೇಕೆಂಬುದು ನಿರ್ಮಾಪಕರ ಒತ್ತಾಸೆಯಾಗಿದೆ. ಅದಕ್ಕನುಗುಣವಾಗಿ ಬೇಕೆನ್ನುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಲು ಅವರು ಸಿದ್ಧರಿರುವುದು ಹೆಮ್ಮೆಯ ಸಂಗತಿ.
No Comment! Be the first one.