ಜಯಂ ರವಿ ಸದ್ಯ ತಮ್ಮ 24ನೇ ಸಿನಿಮಾ ಕೋಮಲಿಯನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರವನ್ನು ಪ್ರದೀಪ್ ರಂಗನಾಥನ್ ನಿರ್ದೇಶನ ಮಾಡುತ್ತಿದ್ದಾರೆ. ಜಯಂ ರವಿಗೆ ಜತೆಯಾಗಿ ಕಾಜಲ್ ಅಗರ್ ವಾಲ್ ಮತ್ತು ಯೋಗಿ ಬಾಬು ಜತೆಯಾಗಿದ್ದಾರೆ. ಜಯಂ ರವಿಯ 25ನೇ ಸಿನಿಮಾವನ್ನು ಜಯಂ ರವಿ ಅತ್ತೆ ಸುಜಾತ ರವರೇ ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾವನ್ನು ರೋಮಿಯೋ ಜೂಲಿಯೆಟ್ ಖ್ಯಾತಿಯ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಜಯಂ ರವಿ ತಮ್ಮ 26ನೇ ಸಿನಿಮಾವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾವನ್ನು ಅಹಮದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅಹಮದ್ ಸೂಪರ್ ಹಿಟ್ ಸಿನಿಮಾ ಎಂಡ್ರೆಂಡ್ರಮ್ ಪುಂಗೈ ಯನ್ನು ನಿರ್ದೇಶನ ಮಾಡಿದ್ದರು. ಸದ್ಯದ ಹೊಸ ವಿಚಾರ ಏನಂದ್ರೆ ಆ ಚಿತ್ರಕ್ಕೆ ತಾಪ್ಸಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಕುರಿತು ಮತ್ತು ತಾರಾಂಗಣದ ಕುರಿತಾಗಿಯೂ ಅಧಿಕೃತ ಮಾಹಿತಿ ಹೊರ ಬೀಳಲಿದೆ.
No Comment! Be the first one.