ಕನ್ನಡ ಮತ್ತು ತೆಲುಗು ಸಿನಿಮಾ ನಿರ್ಮಾಪಕಿ ಜಯಶ್ರೀದೇವಿ (60 ವರ್ಷ) ಅಗಲಿದ್ದಾರೆ. ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಂದು (ಫೆ.13) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
‘ಕೋಣ ಈದೈತೆ’ ಕನ್ನಡ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದೊಂದಿಗೆ ಅವರ ಸಿನಿಮಾ ಅಭಿಯಾನ ಆರಂಭವಾಗಿತ್ತು. ವಿಷ್ಣುವರ್ಧನ್, ಕುಮಾರ್ ಗೋವಿಂದ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಮುಂದೆ ‘ಭವಾನಿ’ ಕನ್ನಡ ಚಿತ್ರ ನಿರ್ದೇಶಿಸಿದ ನಂತರ ಅವರು ಪೂರ್ಣಪ್ರಮಾಣದ ನಿರ್ಮಾಪಕಿಯಾಗಿ ಮುಂದುವರಿದರು.
‘ನಮ್ಮೂರ ಮಂದಾರ ಹೂವೆ’, ‘ಅಮೃತವರ್ಷಿಣಿ’, ‘ಸ್ನೇಹಲೋಕ’, ‘ಹಬ್ಬ’, ‘ವಂದೇ ಮಾತರಂ’, ‘ಪ್ರೇಮರಾಗ ಹಾಡು ಗೆಳತಿ’, ‘ಶ್ರೀ ಮಂಜುನಾಥ’ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಜಯಶ್ರೀದೇವಿ ನಿರ್ಮಿಸಿದ್ದಾರೆ. 2016ರಲ್ಲಿ ತೆರೆಕಂಡಿದ್ದ ಸುದೀಪ್, ಉಪೇಂದ್ರ ಅಭಿನಯದ ‘ಮುಕುಂದ ಮುರಾರಿ’ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು. ಜಯಶ್ರೀದೇವಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
#
No Comment! Be the first one.