ಒಬ್ಬೊಬ್ಬರದ್ದೂ ಒಂದೊಂದು ಸಮಸ್ಯೆ, ಬಾಧೆಗಳು.
ಈಗ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಪಾಲಿಗೆ ಸ್ವಂತ ಸೋದರ ಮಾವನೇ ಕೇಡಿ ಥರಾ ಕಾಡುತ್ತಿದ್ದಾನೆ.
ಬಿಗ್‌ಬಾಸ್ ಶೋ ಆದ ನಂತರದಲ್ಲಿ ಈ ಜಯಶ್ರೀ ನಟಿಯಾಗೋದರತ್ತಲೇ ಗಮನ ಹರಿಸಿದ್ದರು. ಈಕೆ ಈಗಾಗಲೇ ಉಪ್ಪು ಹುಳಿ ಖಾರ ಮತ್ತು ಶಿರಾಡಿ ಘಾಟ್ ಚಿತ್ರದಲ್ಲಿ ನಟಿಸಿದ್ದಾರೆ. ಖಾಸಗಿ ಕಂಪೆನಿಯೊಂದರಲ್ಲಿ ಎಚ್‌ಆರ್ ಆಗಿದ್ದರೂ ಮಾಡೆಲಿಂಗ್ ಸೆಳೆತದಿಂದ ಅತ್ತ ಸಾಗಿದ್ದ ಈ ಹುಡುಗಿ ಕನ್ನಡಿಗರಿಗೆ ಪರಿಚಿತಳಾಗಿದ್ದೇ ಬಿಗ್‌ಬಾಸ್ ಶೋನಿಂದ. ಆ ಶೋನಿಂದ ಹೊರ ಬಂದ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದ ಜಯಶ್ರೀ ಇತರೆ ಟೀವಿ ಕಾರ್ಯಕ್ರಮಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಸದ್ಯ ಜಯಶ್ರೀ ಮತ್ತು ಆಕೆಯ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರಹಾಕಿ ಅಮಾನವೀಯತೆ ಪ್ರದರ್ಶಿಸಿದ್ದಾನೆ. ಆಸ್ತಿ ವಿವಾದ ಸೇರಿದಂತೆ ಖಾಸಗೀ ಸಮಸ್ಯೆಗಳೂ ಜೊತೆಯಾಗಿ ಜಯಶ್ರೀ ಮನೆಯಲ್ಲಿ ಸೆಪ್ಟೆಂಬರ್ ೧೦ರ ರಾತ್ರಿ ಜೋರು ಜಗಳವಾಗಿದೆ. ನಡುರಾತ್ರಿ ಅನ್ನೋದನ್ನೂ ಲೆಕ್ಕಿಸದ ಜಯಶ್ರೀಯ ಸೋದರ ಮಾವ ಗಿರೀಶ್ ಈಕೆಯ ತಾಯಿಯ ಸಮೇತ ಮನೆಯಿಂದ ಹೊರಗೆ ಕಳಿಸಿಬಿಟ್ಟಿದ್ದಾನೆ. ಅಷ್ಟೊತ್ತಲ್ಲಿ ಎರಡು ಹೆಣ್ಣು ಜೀವಗಳು ಹೋಗುವುದಾದರೂ ಎಲ್ಲಿಗೆ? ಕಡೆಗೆ ಅಶೋಕನಗರದಲ್ಲಿರುವ ಅಜ್ಜಿಯ ಮನೆಗೆ ಹೋಗಿ ಬಚಾವಾಗಿದ್ದಾರೆ.
ಸದ್ಯ ಈ ಕುರಿತಾಗಿ ಜಯಶ್ರೀ ಮತ್ತವರ ತಾಯಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಸೋದರ ಮಾವ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ.
CG ARUN

ದಾಸನ ಗರಡಿಯ ಹುಡುಗನಿಗೆ ಉಸ್ತಾದ್ ಸಾಥ್!

Previous article

ಅಗ್ನಿಯಿಂದ ಎಗರಿ ಹಳ್ಳಕ್ಕೆ ಬಿದ್ದ ವಿಜಯ್ ಸೂರ್ಯ

Next article

You may also like

Comments

Leave a reply

Your email address will not be published. Required fields are marked *