ಹಳೆ ನಟ ನಟಿಯರಿಗೆ ಫಿಕ್ಸ್ ಆಗಿದ್ದ ಪ್ರೊಡ್ಯೂಸರ್ ಗಳಿಗೆ ಈಗೀಗ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಮುಖಗಳ ಪರಿಚಯವಾಗುತ್ತಿದೆ. ಅಲ್ಲದೇ ಹೊಸ ಹೊಸ ಪ್ರತಿಭೆಗಳ ಎಂಟ್ರಿಯೂ ಭರ್ಜರಿಯಾಗಿಯೇ ಸಾಗುತ್ತಿದೆ. ಅದರಲ್ಲೂ ರಾಜಕಾರಣಿಗಳ ಮಕ್ಕಳು ಪಾಲಿಟಿಕ್ಸ್ ಗೆ ಎಂಟ್ರಿ ಕೊಡುವುದಕ್ಕಿಂದ ಸಿನಿಮಾ ಲೋಕಕ್ಕೆ ಎಂಟ್ರಿ ನೀಡುವ ವಿದ್ಯಮಾನಗಳು ಹೆಚ್ಚಾಗಿವೆ. ಈ ಹಿಂದೆ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ ಸ್ವಾಮಿ ಜಾಗ್ವಾರ್ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಪಡೆದ್ರೆ, ಚೆಲುವರಾಯ ಸ್ವಾಮಿ ಪುತ್ರ ಸಚಿನ್, ಹೆಚ್.ಎಂ. ರೇವಣ್ಣ ಪುತ್ರ ಅನೂಪ್ ಕೂಡ ಬೆಳ್ಳಿ ತೆರೆಗೆ ಎಂಟ್ರಿ ಹಾಕಿದ್ದರು.
ಈ ಮೊದಲು ಜಮೀರ್ ಅಹಮದ್ ಪುತ್ರ ಜಾಹಿದ್ ಖಾನ್ ಸಹ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದು, ಆ ಚಿತ್ರವನ್ನು ಬೆಲ್ ಬಾಟಂ ಖ್ಯಾತಿಯ ಜಯ ತೀರ್ಥ ನಿರ್ದೇಶನ ಮಾಡಲಿದ್ದಾರೆ ಎಂಬ ವಿಚಾರವನ್ನು ತಿಳಿಸಿದ್ದೆವು. ಕೆಲ ದಿನಗಳ ಹಿಂದೆ ಚಿತ್ರದ ಸಲುವಾಗಿಯೇ ಜಯತೀರ್ಥ ತಮ್ಮ ಸಹಪಾಠಿಗಳ ಜತೆಗೆ ಕಾಶಿಗೆ ಪ್ರಯಾಣ ಬೆಳೆಸಿದ್ದರು. ಸದ್ಯ ಕಾಶಿಯಿಂದ ಹಿಂತಿರುಗಿರುವ ಜಯತೀರ್ಥ, ಸಿನಿಮಾದ ಕುರಿತು ಮಾತನಾಡಿದ್ದು, ಜಮೀರ್ ಪುತ್ರನಿಗಾಗಿ ಒಂದು ಲವ್ ಸ್ಟೋರಿ ಸಿನಿಮಾವನ್ನು ತಯಾರು ಮಾಡಿದ್ದು, ಪೂರ್ತಿ ಲವ್ ಸ್ಟೋರಿ ಕಾಶಿಯಲ್ಲಿ ನಡೆಯುವುದರಿಂದ ಕಥೆಗೆ ಸಿಂಕ್ ಆಗುವುದರಿಂದ ಕೆಲ ಲೊಕೇಶನ್ ಗಳನ್ನು ಸೆಲೆಕ್ಟ್ ಮಾಡಿಕೊಂಡು ಬಂದಿದ್ದಾರಂತೆ. ಸಿನಿಮಾ ಸ್ಕ್ರಿಪ್ಟ್ ಕೆಲಸ ಭರದಿಂದ ಸಾಗುತ್ತಿದೆ. ಸಿನಿಮಾ ಶೂಟಿಂಗ್ ಆಗಸ್ಟ್ ನಿಂದ ಆರಂಭವಾಗಲಿದ್ದು, ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.
No Comment! Be the first one.