ವಿಲನ್ ಸಿನಿಮಾದ ಆ್ಯವರೇಜ್ ಸಕ್ಸಸ್ ನ ನಂತರ ಜೋಗಿ ಪ್ರೇಮ್ ರಘು ಹಾಸನ್ ನಿರ್ದೇಶನದ ಗಾಂಧಿ ಗಿರಿ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರೋದು ಎಲ್ಲರಿಗೂ ತಿಳಿದ ವಿಚಾರ. ಗಾಂಧಿಗಿರಿ ಮೇಕಿಂಗ್ ಹಾಗೂ ಕ್ವಾಲಿಟಿಯಿಂದ ಈಗಾಗಲೇ ಗಾಂಧಿನಗರದಲ್ಲಿ ದೊಡ್ಡ ಚರ್ಚೆ ಹುಟ್ಟಿಸಿದೆ. ಇದೀಗ ಬಹುಭಾಷಾ ನಟ ಜೆ.ಡಿ ಚಕ್ರವರ್ತಿ ಗಾಂಧಿಗಿರಿ ಟೀಮ್ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಡಬಲ್ ಶೇಡ್ ಇರೋ ಪಾತ್ರದಲ್ಲಿ ಜೆ.ಡಿ ಕಾಣಿಸಿಕೊಳ್ತಿದ್ದು ಪ್ರೇಮ್ಗೆ ಎದುರಾಳಿಯಾಗಿ ತೊಡೆತಟ್ಟಲಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ತುಪ್ಪದ ಬೆಡಗಿ ರಾಗಿಣಿ ಜೊತೆಯಾಗಿದ್ದಾರೆ. ಈಗಾಗಲೇ ‘ಪ್ರೇಮ್ ಅಡ್ಡ, ಡಿಕೆ ಸಿನಿಮಾದಲ್ಲಿ ಖದರ್ ತೋರಿಸಿದ್ದ ಪ್ರೇಮ್ ಇದೀಗ ಗಾಂಧಿಗಿರಿ ಮಾಡೋಕೆ ಬರ್ತಾಯಿದ್ದು, ಟೈಟಲ್ನಿಂದಲೇ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಸೌತ್ ಇಂಡಿಯಾದ ಪ್ರತಿಭಾವಂತ ನಟರುಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಜೆ.ಡಿ. ಬಹುಭಾಷಾ ನಟನಾಗಿ ದೊಡ್ಡ ಹೆಸರನ್ನೇ ಸಂಪಾದಿಸಿದ್ದಾರೆ. ಸೌತ್ ಇಂಡಿಯಾದ ಬಹುತೇಕ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಜೆಡಿ ಇದೀಗ ಕನ್ನಡದಲ್ಲೂ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ಅರ್ಜುನ್ ಸರ್ಜಾ ಜೊತೆಗೆ ಕಾಂಟ್ರಾಕ್ಟ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮುನ್ನವೇ ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ಒದಗಿಬಂದಿದ್ದು, ಇದೀಗ ಜೋಗಿ ಪ್ರೇಮ್ ನಟನೆಯ ಗಾಂಧಿಗಿರಿಯಲ್ಲಿ ನಟಿಸುವುದಕ್ಕೆ ಅಸ್ತು ಅಂದಿದ್ದಾರೆ.
No Comment! Be the first one.