ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಪ್ರೀತಿಯ ಮತಬಾಂಧವರಿಗೆ ನಿಮ್ಮ ಮನೆ ಮಗ ಹೆಚ್.ಪಿ ರಾಜಗೋಪಾಲ ರೆಡ್ಡಿ ಮಾಡುವ ನಮಸ್ಕಾರಗಳು.
ಇದೇ ವಿಧಾನಸಭಾ ಕ್ಷೇತ್ರದಲ್ಲಿ ಹುಟ್ಟಿ, ಬೆಳೆದ ನಾನು ನನ್ನ ಕ್ಷೇತ್ರದ ಜನರಿಗೆ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ, ಯಾವುದೇ ಸ್ವಾರ್ಥ ವಿಲ್ಲದೆ, ಇಲ್ಲಿಯವರೆಗೂ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ. ಬಡವರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಹಾಗೂ ನನ್ನ ಕ್ಷೇತ್ರದಲ್ಲಿ ಇರುವ ಎಲ್ಲಾ ಅಶಕ್ತ ಜನರಿಗೆ ಇನ್ನು ಹೆಚ್ಚು ಹೆಚ್ಚು ಸೇವೆಗಳನ್ನು ಮಾಡಬೇಕೆನ್ನುವುದು ನನ್ನ ಮಹಾಭಿಲಾಷೆ.
ಜೊತೆಗೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೂಡ ನನ್ನ ಕನಸು. ಈ ಎಲ್ಲಾ ನನ್ನ ಸೇವೆಗಳು, ಕನಸುಗಳಿಗೆ ಸ್ಪೂರ್ತಿ ತುಂಬ ಬೇಕಾಗಿರುವುದು ನನ್ನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರೀತಿಯ ಜನರು. 2023 ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜನತಾದಳದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ತೆನೆ ಹೊತ್ತ ಮಹಿಳೆಯ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ, ನಿಮ್ಮ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಲು ನನಗೆ ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಸಮಾಜದ ಕೆಳವರ್ಗದವರ, ಮುಖ್ಯವಾಗಿ ಕೃಷಿಕರ ಉನ್ನತಿಯಲ್ಲಿ ದಕ್ಷ ಪಾತ್ರ ವಹಿಸಿರುವ ಪಕ್ಷ ಜೆಡಿಎಸ್. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು ಮತ್ತು ಮಹಿಳೆಯರಿಗೆ ಅನುಕೂಲವಾಗುವ ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸಿದ ಕರ್ನಾಟಕದ ಹೆಮ್ಮೆಯ ಪ್ರಾದೇಶಿಕ ಪಕ್ಷವಿದು. ಮತಭಾಂದವರ ಆಶೀರ್ವಾದದಿಂದ ಸರ್ಕಾರವನ್ನು ನಡೆಸುವ ಸೌಭಾಗ್ಯ ದೊರೆತ ಎಲ್ಲಾ ಕಾಲದಲ್ಲಿಯೂ ದೇಶ ಹಾಗು ರಾಜ್ಯದ ಸುಖ-ಶಾಂತಿಗಳಿಗಾಗಿ ದುಡಿದು ಜನರ ವಿಶ್ವಾಸವನ್ನು ಗೆದ್ದಿದೇವೆ. ಜನರೊಂದಿಗೆ, ಜನರಿಗಾಗಿ ಸದಾ ಇದ್ದೇವೆ, ಇರುತ್ತೇವೆ.
ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿದ್ದು, ರಾಜ್ಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಮೋಸ, ಭಾಷಾ ಹೇರಿಕೆ, ಬೆಲೆ ಏರಿಕೆ, ಧಾರ್ಮಿಕ ಸಂಘರ್ಷ ಇವೆಲ್ಲವೂ ಕೊನೆಯಾಗುವ ಸಮಯವಿದು.
ಕರ್ನಾಟಕದ ಉಳಿವಿಗಾಗಿ ಜೆಡಿಎಸ್ ಗೆಲುವು ಅವಶ್ಯವಾಗಿದೆ.
ಜೆಡಿಎಸ್ ಪಕ್ಷ ನೀಡಿರುವ ಭರವಸೆಗಳನ್ನು ನನಸಾಗಿಸಲು ಶ್ರದ್ದಾ-ಭಕ್ತಿಯಿಂದ ಜನರ ಸೇವೆ ಮಾಡಲು ತಮ್ಮ ಆಶೀರ್ವಾದ ಕೋರುತ್ತಿದ್ದೇನೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ದುಡಿಯುವ ಹಂಬಲದಿಂದ ತಮ್ಮ ಅಮೂಲ್ಯವಾದ ಮತವನ್ನು ಕೋರುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸದಾ ದುಡಿಯುವ…
ಹೆಚ್.ಪಿ. ರಾಜಗೋಪಾಲ ರೆಡ್ಡಿ.