ಕಾಫಿರ್ ವೆಬ್ ಸರಣಿಯ ಅಭಿನಯಕ್ಕಾಗಿ ಅಭಿಮಾನಿಗಳಿಂದ ಭರಪೂರ ಪ್ರಶಂಸೆಯನ್ನು ಪಡೆದಿರುವ ದಿಯಾ ವೆಬ್ ಸರಣಿಯ ಸಕ್ಸಸ್ ನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಇಂಡಸ್ಟ್ರಿಯಲ್ಲಿರುವ ನಟಿಯರಿಗೆ ಸಲಹೆಗಳನ್ನು ಕೊಡುವ ದಿಯಾ “‘ಆ ನಟಿಗೆ ವಯಸ್ಸಾಯಿತು’ ಎಂದು ಮಹಿಳೆಯರನ್ನು ಪಕ್ಕಕ್ಕೆ ಸರಿಸುವ ಪರಿಪಾಠಕ್ಕೆ ವೆಬ್‌ ಮಾಧ್ಯಮ ಕೊನೆ ಹಾಡಬಲ್ಲದು. ವೆಬ್‌ ಸರಣಿ ಅಥವಾ ವೆಬ್‌ ಮೂಲಕ ಪ್ರಸಾರ ಆಗುವ ಮನರಂಜನಾ ಕಾರ್ಯಕ್ರಮಗಳ ನಿರ್ಮಾಪಕರು, ನಿರ್ದೇಶಕರು ಯಾವ ಪಾತ್ರಕ್ಕೆ ಯಾರು ಸೂಕ್ತ ಎಂಬುದನ್ನು ತೀರ್ಮಾನಿಸುವ ಸಂದರ್ಭದಲ್ಲಿ ಕಲಾವಿದರ ವಯಸ್ಸನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.ಇದು ಒಳ್ಳೆಯ ಬೆಳವಣಿಗೆ’ ಎಂದು ದಿಯಾ ಹೇಳಿದ್ದಾರೆ.

‘ಆ ನಟಿಗೆ ವಯಸ್ಸಾಯಿತು ಎಂದು, ಅವರನ್ನು ಪೂರ್ವಗ್ರಹಪೀಡಿತವಾಗಿ ನೋಡುವ ಧೋರಣೆ ಹಿಂದಿನಿಂದಲೂ ಇದೆ. ನಾವು ಕೂಡ ಇದನ್ನು ಕಳೆದ 15-20 ವರ್ಷಗಳಲ್ಲಿ ಅನುಭವಿಸಿದ್ದೇವೆ. ಆದರೆ ಈಗ, ವೆಬ್‌ ಸರಣಿಗಳಲ್ಲಿ ಮಹಿಳೆಯರಿಗೆ ಒಳ್ಳೊಳ್ಳೆಯ ಪಾತ್ರಗಳನ್ನು ನಿಭಾಯಿಸುವ ಅವಕಾಶಗಳು ಲಭ್ಯವಾಗುತ್ತಿವೆ. ತಾವು ಬಯಸಿದ ಪಾತ್ರಗಳು ತಮ್ಮ ವಯಸ್ಸಿನ ಕಾರಣಕ್ಕೆ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ಎದುರಿಸುತ್ತಿದ್ದ ನಟಿಯರಿಗೆ ವೆಬ್‌ ಮಾಧ್ಯಮದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ’ ಎಂದು ದಿಯಾ ಮನಬಿಚ್ಚಿ ಮಾತನಾಡಿದ್ದಾರೆ.  ‘ಕಾಫಿರ್‌’ ವೆಬ್‌ ಸರಣಿಯು ದಿಯಾ ಅವರು ನಟಿಸಿದ ಮೊದಲ ವೆಬ್ ಆಧಾರಿತ ಕಾರ್ಯಕ್ರಮವಾಗಿದೆ. ಈಗ ಅವರು ನಿಖಿಲ್ ಅಡ್ವಾಣಿ ಅವರ ‘ಮೊಘಲ್ಸ್‌’ ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಲಿದ್ದಾರೆ. ‘ಕಾಫಿರ್’ ವೆಬ್‌ ಸರಣಿಯು ಈಗ ಕನ್ನಡಕ್ಕೆ ಕೂಡ ಡಬ್‌ ಆಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನೀರ್ ದೋಸೆ ಗ್ಯಾಂಗು ಪರಿಮಳ ಲಾಡ್ಜಿನಲ್ಲಿ ಒಂದಾಯ್ತು!

Previous article

ಸಹೋದರ ಸತ್ಯನಾರಾಯಣನ ಆರೋಗ್ಯ ವಿಚಾರಿಸಿದ ರಜನಿಕಾಂತ್!

Next article

You may also like

Comments

Leave a reply

Your email address will not be published. Required fields are marked *