ಡೌಟೇ ಇಲ್ಲ.. ಕವಿರಾಜ್ ಮಾಡಿರುವ ಕಳ್ಳ ಕೆಲಸಕ್ಕಾಗಿ, ಒಂದೇ ಏಟಿಗೆ ಎಲ್ಲರನ್ನೂ ಯಾಮಾರಿಸಿದ್ದಕ್ಕಾಗಿ, ಆ ಮೂಲಕ ಈಗ ಕನ್ನಡ ಚಿತ್ರರಂಗದ ಮಾನ ತೆಗೆಯುತ್ತಿರುವ ಕಾರಣಕ್ಕೆ ಕರ್ನಾಟಕದ ಜನ ಬೇಸರವನ್ನಷ್ಟೇ ಪಡಲು ಸಾಧ್ಯ!
ಈ ಬಾರಿಯ ಬೆಂಗಳೂರು ಇಂಟರ್’ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಆಯ್ಕೆಯಾಗಿರುವ ಸಿನಿಮಾಗಳ ಅಸಲಿಯತ್ತು ಒಂದೊಂದಾಗಿ ಹೊರಬರುತ್ತಿದೆ. ಖ್ಯಾತ ಗೀತ ಸಾಹಿತಿ ಕವಿರಾಜ್ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಸೇರಿದಂತೆ ಒಂದಷ್ಟು ಚಿತ್ರಗಳು ಬೇರೆ ರಾಜ್ಯ, ದೇಶಗಳ ಸಿನಿಮಾಗಳ ನಕಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ಈ ಬಾರಿ ಕನ್ನಡ ಚಿತ್ರರಂಗದ ಮಾನ ಬೆಂಗಳೂರು ಚಿತ್ರೋತ್ಸವದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೇ ಹರಾಜಾಗುವ ಸಾಧ್ಯತೆಯಿದೆ!
ಕವಿರಾಜ್ ಅವರಿಗೆ ತಮ್ಮ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ಸ್ಪರ್ಧಿಸಲಿದೆ ಎನ್ನುವ ಬಯಕೆ ಇತ್ತಂತೆ. ಆದರೆ ಜನಪ್ರಿಯ ಸಿನಿಮಾವಾಗಿ ಪ್ರದರ್ಶನಗೊಳ್ಳುತ್ತಿರುವುದರಿಂದ ಖುಷಿ ಪಡಬೇಕೋ, ಬೇಸರ ಪಡಬೇಕೋ ಗೊತ್ತಾಗುತ್ತಿಲ್ಲವಂತೆ. ಸ್ವತಃ ಕವಿರಾಜ್ ತಮ್ಮ ಸಿನಿಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದರ ಕುರಿತಾಗಿ ಹೀಗೆ ಪ್ರತಿಕ್ರಿಯಿಸಿದ್ದರು ; “ನಮ್ಮ ‘ಕಾಳಿದಾಸ ಕನ್ನಡ ಮೇಷ್ಟ್ರು’ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಅವಶ್ಯಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿ, ಉತ್ತಮ ಸಾಮಾಜಿಕ ಸಂದೇಶ ಸಾರಿದ ಕಾರಣ ಅವಾರ್ಡ್ ವಿಭಾಗದಲ್ಲಿ ಖಂಡಿತಾ ಸ್ಪರ್ಧೆಗೆ ಸ್ಥಾನ ಪಡೆಯುವುದೆಂದು ಸಿನಿಮಾ ನೋಡಿ ಮಾತಾಡಿದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಹಾಗಾಗಿ ನಮಗೂ ಈ ನಿರೀಕ್ಷೆ ಇತ್ತು. ಇತ್ತ ಮನರಂಜನೆಯು ಸಾಕಷ್ಟು ಇದ್ದ ಕಾರಣ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದು ೭೫ ದಿನಗಳ ಪ್ರದರ್ಶನ ಕಂಡಿದ್ದನ್ನು ಪರಿಗಣಿಸಿಯೇನೋ ಇದನ್ನು ಪ್ರಶಸ್ತಿಗೆ ಸ್ಪರ್ಧಿಸುವ ಪಟ್ಟಿಯಿಂದ ಹೊರಗಿಟ್ಟು ಶ್ರೀಮನ್ನಾರಾಯಣ, ಯಜಮಾನ, ಪೈಲ್ವಾನ್, ಕುರುಕ್ಷೇತ್ರ ಮುಂತಾದ ಸಿನಿಮಾಗಳ ಸಾಲಿನಲ್ಲಿ ಜನಪ್ರಿಯ ಹಿಟ್ ಚಿತ್ರಗಳೆಂದು ಪ್ರದರ್ಶನಗೊಳ್ಳುವ ಪಟ್ಟಿಯಲ್ಲೀ ಸೇರಿಸಲಾಗಿದೆ. ಖುಷಿ ಪಡಬೇಕೋ, ಬೇಸರ ಪಡಬೇಕೋ ಗೊತ್ತಾಗ್ತಿಲ್ಲ.”
ಡೌಟೇ ಇಲ್ಲ.. ಕವಿರಾಜ್ ಮಾಡಿರುವ ಕಳ್ಳ ಕೆಲಸಕ್ಕಾಗಿ, ಒಂದೇ ಏಟಿಗೆ ಎಲ್ಲರನ್ನೂ ಯಾಮಾರಿಸಿದ್ದಕ್ಕಾಗಿ, ಆ ಮೂಲಕ ಈಗ ಕನ್ನಡ ಚಿತ್ರರಂಗದ ಮಾನ ತೆಗೆಯುತ್ತಿರುವ ಕಾರಣಕ್ಕೆ ಕರ್ನಾಟಕದ ಜನ ಬೇಸರವನ್ನಷ್ಟೇ ಪಡಲು ಸಾಧ್ಯ!
ಕವಿರಾಜ್ ನಿರ್ದೇಶನದಲ್ಲಿ, ಜಗ್ಗೇಶ್ ಅಭಿನಯಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಮಲಯಾಳಂನ ಸಾಲ್ಟ್ ಮ್ಯಾಂಗೋ ಟ್ರೀ ಚಿತ್ರವನ್ನು ಆಧರಿಸಿ ರೂಪಿಸಿದ್ದು ಅಂತಾ ಆರೋಪವೆದ್ದಿದೆ. ನಮ್ಮ ಕನ್ನಡ ಸಿನಿಮಾದವರಿಗೆ ಕೆಟ್ಟ ರೋಗವಿದೆ ಕೊರಿಯನ್ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳನ್ನು ಆಧರಿಸಿ ಸಿನಿಮಾ ಮಾಡಿ, ಅದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡೋದು. ಅದೆಷ್ಟು ಧೈರ್ಯವಿದ್ದರೆ, ಕದ್ದು ಸಿನಿಮಾ ಮಾಡಿದ್ದೂ ಅಲ್ಲದೆ, ಅದನ್ನು ಪ್ರಶಸ್ತಿ, ಚಿತ್ರೋತ್ಸವದ ಆಯ್ಕೆ ಸಮಿತಿಗಳ ಮುಂದೆ ಕಳಿಸುತ್ತಾರೋ? ಕಳೆದ ವರ್ಷ ಲೌಡ್ ಸ್ಪೀಕರ್ ಎನ್ನುವ ಸಿನಿಮಾವೊಂದರ ಕಥೆಗಾರ(?) ವಿದೇಶೀ ಸಿನಿಮಾವನ್ನು ಎತ್ತುವಳಿ ಮಾಡಿ, ಅದು ಬಿಡುಗಡೆಯ ದಿನ ‘ಇದು ಕಳ್ಳ ಮಾಲು’ ಅಂತಾ ಗೊತ್ತಾಗಿತ್ತು. ನಿರ್ಮಾಪಕರು ಚಿತ್ರಮಂದಿರಕ್ಕೆ ಬಂದಿದ್ದ ಸಿನಿಮಾವನ್ನು ವಾಪಾಸು ಪಡೆದರು. ಇದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಲುಕ್ಸಾನಾಗಿತ್ತು. ಇನ್ನು ಸಾಕಷ್ಟು ಮಂದಿ ಬೇರೆ ಸಿನಿಮಾಗಳ ಸ್ಫೂರ್ತಿಯಿಂದ ಸಿನಿಮಾ ರೂಪಿಸುತ್ತಾರೆ. ಅದರಲ್ಲಿ ಕೆಲವರು ನೇರವಾಗಿ ಹೇಳಿಕೊಂಡರೆ, ಸಾಕಷ್ಟು ಜನ ಒಳಗೊಳಗೇ ಮರೆ ಮಾಚಿಕೊಳ್ಳುತ್ತಾರೆ.

ಈಗ ಕವಿರಾಜ್ ಬರೀ ಮ್ಯಾಂಗೋ ಕಿತ್ತಿಲ, ಟ್ರೀ ಸಮೇತ ತಂದು ಅದಕ್ಕೆ ಉಪ್ಪು ಖಾರ ಬೆರೆಸಿಕೊಂಡಿದ್ದಾರೆ. ಕವಿರಾಜ್ ಕನ್ನಡದ ಹೆಮ್ಮೆಯ ಗೀತರಚನೆಕಾರ. ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ತೂಗುದೀಪ ಬ್ಯಾನರು ನಿರ್ಮಿಸಿದ್ದ ಇವರ ಮೊದಲ ಸಿನಿಮಾ ಹೇಳಹೆಸರಿಲ್ಲದಂತಾಗಿತ್ತು. ಎರಡನೇ ಸಿನಿಮಾವಾದರೂ ಜನಪ್ರಿಯವಾಯ್ತಲ್ಲಾ ಅಂತಾ ಸಮಾಧಾನಪಟ್ಟುಕೊಳ್ಳುವ ಹೊತ್ತಿಗೇ ಇಂಥದ್ದೊಂದು ಅವಮರ್ಯಾದೆ ಎದುರಾಗಿದೆ…
ಏನು ಹೇಳುವಿರಿ ಕವಿಗಳೇ… ನಿಮ್ಮದು ಚೌರ್ಯವೋ? ಸ್ಪೂರ್ತಿಯೋ?
No Comment! Be the first one.