ಸತತ ಸೋಲಿನಿಂದ ಕಂಗೆಟ್ಟಿದ್ದ ಶಾಹಿದ್ ಕಪೂರ್ ಗೆ ಕಬೀರ್ ಸಿಂಗ್ ಮರು ಜೀವ ಕೊಟ್ಟ ಸಿನಿಮಾ ಎಂದರೆ ತಪ್ಪಿಲ್ಲ. ತೆಲುಗಿನ ಬ್ಲಾಕ್ ಬಸ್ಟರ್ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ಅವತರಣಿಕೆಯ ಈ ಸಿನಿಮಾ ರಿಲೀಸ್ ಆಗಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸುತ್ತಿದ್ದಂತೆ ಶಾಹಿದ್ ಕಪೂರ್ ಸ್ಟಾರ್ ವ್ಯಾಲ್ಯೂ ಹೆಚ್ಚಾಗುವ ಜತೆಗೆ ಏಕಾಏಕಿ ಸಂಭಾವನೆಯಲ್ಲಿಯೂ ಏರಿಕೆ ಕಂಡುಬಂದಿದೆ.

ಸತತ ಸೋಲುಗಳಿಂದ ಕಂಗೆಟ್ಟಾಗ ತಿರುಗಿ ನೀಡದ ಬಾಲಿವುಡ್‌ ನಿರ್ಮಾಪಕರು ‘ಕಬೀರ್‌ ಸಿಂಗ್‌’ ಹಿಟ್‌ ಆಗಿದ್ದೆ ತಡ ಶಾಹಿದ್‌ ಹಿಂದೆ ಬಿದ್ದಿದ್ದಾರೆ. ಶಾಹಿದ್‌ ಹಾಕಿಕೊಂಡು ಸಿನಿಮಾ ಮಾಡಲು ಮನೆಯ ಬಾಗಿಲಿಗೆ ಎಡತಾಕುತ್ತಿದ್ದಾರೆ. ಅದರ ಬೆನ್ನಲ್ಲೇ ಶಾಹಿದ್ ಕೂಡ ತಮ್ಮ ಸಂಭಾವನೆ ಏರಿಸಿದ್ದಾರೆ. ಒಂದು ಮೂಲದ ಪ್ರಕಾರ ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾಹಿದ್‌ 40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಾಂಧವನ ಮೇಲೆ ದರ್ಶನ್ ನೆರಳು!

Previous article

ಡಿಂಗ್ ಚಾಕ್ ಪೂಜ ಅವರ ಹೊಸ ಸಾಂಗ್ ವೈರಲ್!

Next article

You may also like

Comments

Leave a reply

Your email address will not be published. Required fields are marked *