- ಸಂತೋಷ್ ಸಕ್ರೆಬೈಲು
ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡೋಕೆ ಸಜ್ಜಾಗ್ತಿರೋ ಮತ್ತೊಂದು ಸ್ಯಾಂಡಲ್ವುಡ್ನ ಪವರ್ ಪ್ಯಾಕ್ಡ್ ಸಿನಿಮಾ ಕಬ್ಜ. ಸಿನಿಮಾ ಶುರುವಾದಾಗಿಂದಲೂ ಚಿತ್ರತಂಡ ಒಂದಲ್ಲಾ ಒಂದು ವಿಷಯಗಳನ್ನ ಹೊರ ಬಿಟ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡ್ತಿದೆ. ಸಿನಿ ಸಾಗರದಲ್ಲಿ ಸದ್ದು ಮಾಡೋಕೆ ಸಜ್ಜಾಗ್ತಿರೋ ಕಬ್ಜನಿಗೆ ಆ ಹಿರೋಯಿನ್ ಜೋಡಿಯಾಗ್ತಾರೆ, ಈ ಹಿರೋಯಿನ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡ್ತಾರೆ ಅಂತಾ ಗಾಸಿಪ್ಗಳು ಕೇಳಿದ್ದೇ ಕೇಳಿದ್ದು. ಫೈನಲಿ ಉಪ್ಪಿಗೆ ಪಪ್ಪಿ ಕೊಡೊಕೆ ಟಿಟೌನ್ ಬ್ಯೂಟಿ ಕಾಜಲ್ ಅಗರವಾಲ್ ರೆಡಿಯಾಗ್ತಿದ್ದಾರೆ ಅನ್ನೋ ಹಾಟ್ ನ್ಯೂಸ್ ಹೊರ ಬಿದ್ದಿದೆ.
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋಕೆ ಸೌತ್ ಬ್ಯೂಟಿ ಸಜ್ಜು!
ಹೌದು, ಹೀಗೊಂದು ಸುದ್ದಿ ಸೌತ್ ಇಂಡಿಯಾದಲ್ಲಿ ಹರಿದಾಡ್ತಿದೆ. ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ಜೋಡಿಯಾಗಿ ಕಾಜಲ್ ಅಗರವಾಲ್ ಜೋಡಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಹಿಂದೆ ಕಬ್ಜ ಸಿನಿಮಾ ಟೀಂ ಜೊತೆ ನಯನ ತಾರಾ ಕೈ ಜೋಡಿಸ್ತಾರೆ ಅನ್ನೋ ಟಾಕ್ ಕೂಡ ಸೌಂಡ್ ಮಾಡಿತ್ತು. ಆದ್ರೀಗ ನಯನತಾರಾ ಹೆಸರಿನ ಬದಲು ಕಾಜಲ್ ಅಗರವಾಲ್ ಹೆಸರು ಸ್ವಲ್ಪ ಜೋರಾಗಿಯೇ ಕೇಳಿ ಬರ್ತಿದೆ. ಕಬ್ಜ ಸಿನಿಮಾಗೆ ಇವರೇ ಫಿಕ್ಸ್ ಅನ್ನೋ ಮಾತುಗಳು ಹರಿದಾಡ್ತಿವೆ. ಇತ್ತೀಚೆಗಷ್ಟೇ ಮ್ಯಾರೇಜ್ ಆಗಿ ಮೆಗಾಸ್ಟಾರ್ ಮೂವಿಯಲ್ಲಿ ಆ್ಯಕ್ಟ್ ಮಾಡಿರೊ ಸೌತ್ ಬ್ಯೂಟಿ ಈಗ ಸ್ಯಾಂಡಲ್ವುಡ್ನತ್ತ ಹೆಜ್ಜೆ ಇಡೋಕೆ ಸಜ್ಜಾಗ್ತಿದ್ದಾರೆ.
ಸದ್ಯ ಕಬ್ಜ ಟೀಂಗೆ ಕಾಜಲ್ ಬಂದು ಸೇರಲಿದ್ದಾರೆ ಅನ್ನೋ ಮಾತುಗಳು ಸ್ಯಾಂಡಲ್ವುಡ್ ಅಂಗಳದಲ್ಲಿ ಹೆಚ್ಚಾಗಿ ಕೇಳಿ ಬರ್ತಿದ್ದು, ಕಬ್ಜ ಸಿನಿಮಾದ ಮೂಲಕ ಚಂದದ ನಟಿ ಕಾಜಲ್ ಅಗರವಾಲ್ ಚಂದನವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಚಿತ್ರ ತಂಡ ಅಧಿಕೃತ ಮಾಹಿತಿ ತಿಳಿಸಲಿದ್ದು, ಸದ್ಯದಲ್ಲೇ ಕಬ್ಜ ಸೆಟ್ಗೆ ಕಾಜಲ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಬ್ರಹ್ಮ , ಐಲವ್ಯೂ ಸಿನಿಮಾದ ಮೂಲಕ ಹ್ಯಾಟ್ರಿಕ್ ಕಾಂಬಿನೇಷನ್ನಲ್ಲಿ ಧೂಳೆಬ್ಬಿಸೋಕೆ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪ್ಪಿ ಜೋಡಿ ಮತ್ತೆ ಒಂದಾಗಿದ್ದು, ಹೈ ಎಕ್ಸ್ಪೆಕ್ಟೇಷನ್ ಮೂಡಿಸ್ತಿದೆ ಕಬ್ಜ. ಕನ್ನಡ, ತೆಲುಗು, ತಮಿಳು ಸೇರಿ ಭಾರತದ ಏಳು ಭಾಷೆಗಳಲ್ಲಿ ತೆರೆಗೆ ತರೋಕೆ ಸಜ್ಜಾಗಿದೆ ಉಪ್ಪಿ-ಆರ್ ಚಂದ್ರು ಕಾಂಬೋ.
No Comment! Be the first one.