ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ದ ಐದನೇ ಹಂತದ ಚಿತ್ರೀಕರಣ ಮಿನರ್ವ ಮಿಲ್ ನಲ್ಲಿ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಅವರ ಸಾರಥ್ಯದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ನಾಯಕ ಉಪೇಂದ್ರ ಹಾಗೂ ಬಾಲಿವುಡ್ ನಟ ನವಾಬ್ ಷಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಆಗಿರುವ ಆರ್ ಚಂದ್ರು ಮಾಧ್ಯಮದವರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆಹ್ವಾನಿಸಿ ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮೊದಲಿಗೆ ಆರ್.ಚಂದ್ರು ಮಾತನಾಡಿದರು. ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಅಷ್ಟೊಂದು ಸುಲಭವಲ್ಲ. ಇಲ್ಲಿಯವರೆಗೂ ನಾನೇನು ಮಾಡಿದ್ದೇನು ಎಂಬುದನ್ನು ಫೋಟೊಸ್ ಮೂಲಕ ನೋಡಿದ್ದೀರಾ, ದೀಪಾವಳಿಗೆ ದೃಶ್ಯಾವಳಿ ಮೂಲಕ ನೋಡಲಿದ್ದೀರಿ. ತಾಜಮಹಲ್ ಮಾಡಿ, ಇವತ್ತು ನನ್ನ ಇನ್ನೊಂದು ಪರ್ವ.. ಇಡೀ ಇಂಡಿಯಾ ಮಾತನಾಡಬೇಕು. ಉಪ್ಪಿ ಸರ್ ಅವರ ಬೆಂಬಲದಿಂದಾಗಿ ನನ್ನ ಕನಸು ನನಸಾಗುತ್ತಿದೆ. ನನ್ನ ಮತ್ತು ಅವರ ಸಾಮರಸ್ಯ ಚೆನ್ನಾಗಿದೆ. ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ.
ಇದು ಐದನೇ ಶೆಡ್ಯೂಲ್, ಇಲ್ಲಿ ನಾವು ಏನೋ ಒಂದು ಮಾಡುತ್ತಿಲ್ಲ. ಬಾಹುಬಲಿಗಿಂತ ಹೆಚ್ಚೇ ಆಗಲಿದೆ. ನವಾಬ್ ಷಾ ಅವರಂತಹ ಟೆರಿಫಿಕ್ ಅಜಾನುಬಾಹು ಬೇಕಿತ್ತು. ಬಾಲಿವುಡ್ಗೂ ಒಂದು ಫೇಸ್ ಬೇಕಿತ್ತು. ಅಷ್ಟೇ ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಒಂದು ದೊಡ್ಡ ಪ್ರಯತ್ನ, ಹಾಲಿವುಡ್ ಮಟ್ಟದಲ್ಲಿ ನಮ್ಮ ಸಿನಿಮಾ ತಯಾರಾಗುತ್ತಿದೆ.ಪಾರ್ಟ್ 2- ಮಾಡಲಿದ್ದೇವೆ. ಟ್ರೆಂಡ್ ಸಹ ಹಾಗೇ ಇದೆ. ಮೊದಲ ಭಾಗದಲ್ಲಿ ಗೆಲ್ಲಬೇಕು. ಅದಾದ ಬಳಿಕ ಎರಡನೇ ಭಾಗದ ಪ್ಲಾನ್..
46ದಿನದ ಶೂಟಿಂಗ್ ಇಲ್ಲಿ ಮಾಡಲಿದ್ದೇವೆ. ಬಳಿಕ ಹೈದರಾಬಾದ್, ಮಂಗಳೂರು ಅಲ್ಲಿ ನಡೆಯಲಿದೆ.. ದಿನಗಳನ್ನು ಲೆಕ್ಕ ಹಾಕುತ್ತಿಲ್ಲ. ಕ್ವಾಲಿಟಿ ಕಂಟೆಂಟ್ ಕೊಡುವುದು ನಮ್ಮ ಉದ್ದೇಶ ಇದೊಂದು ಅಂಡರ್ವರ್ಲ್ಡ್ ಔಟ್ ಆಫ್ ದಿ ವರ್ಲ್ಡ್ ಸಿನಿಮಾ ಎಂದು ಕರೆಯಬಹುದು.. ಮುಂದಿನ ದಿನಗಳಲ್ಲಿ ಹೀರೋಯಿನ್ ಯಾರೆಂಬುದನ್ನು ಹೇಳಲಿದ್ದೇವೆ.. ‘ನವಾಬ್ ಷಾ ಅವರು ಇಲ್ಲಿ ಮೂರು ದಿನ ಶೂಟಿಂಗ್ನಲ್ಲಿ ಇರಲಿದ್ದಾರೆ. ಹೈದರಾಬಾದ್ನ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ… ಇಲ್ಲಿಯವರೆಗೂ ಶೇ. 50 ಭಾಗದ ಶೂಟಿಂಗ್ ಮುಗಿದಿದೆ. ಈ ಶೆಡ್ಯೂಲ್ ಮುಗಿದರೆ ಶೇ. 75 ಮುಗಿಯಲಿದೆ. 2022ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದರು.
ಕಥೆ ಹೇಳಿದಾಗಿ 120 ದಿನ ಆಗುತ್ತದೆ ಎಂದಿದ್ದರು, ಮೊನ್ನೆ ಮತ್ತೆ ಕಥೆ ಹೇಳಿದಾಗ 150 ದಿನ ಬೇಕೆಂದರು. ಚಂದ್ರು ಅವರ ಸಿನಿಮಾ ಪ್ಯಾಷನ್ ಮೆಚ್ಚುವಂಥದ್ದು, ಏನೋ ಒಂದು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನನ್ನ ಸಹಕಾರ ಇದ್ದೇ ಇದೆ. ಅವರ ಕನಸಿಗೆ ನಮ್ಮ ಬೆಂಬಲ ಇದೆ. ಕಥೆ ಕೇಳಿದಾಗ ಅಚ್ಚರಿಯಾಗಿತ್ತು. ಹೇಗೆ ಮಾಡುತ್ತೀರಿ ಎಂದು ಚಂದ್ರುಗೆ ಕೇಳಿದ್ದೆ. ಅವರು ಏನು ಅಂದುಕೊಂಡಿದ್ದಾರೋ ಅದು ನೆರವೇರಿದೆ ಎಂದರು ನಾಯಕ ಉಪೇಂದ್ರ. ಕನ್ನಡಲ್ಲಿ ಉಪೇಂದ್ರ ಅವರ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ. ಕಬ್ಜ ಚಿತ್ರದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ರೆಟ್ರೋ ಕಾಲಘಟ್ಟ ಎಂಬುದಕ್ಕಿಂತ ಒಂದು ಭೂಗತ ಲೋಕದ ಅನಾವರಣ ನಾನು ಹಲವು ಸೌತ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ತೆಲುಗು, ಮಲಯಾಳನಲ್ಲಿ ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲಿಯೂ ಒಳ್ಳೆ ಅವಕಾಶ ಸಿಕ್ಕಿದೆ ಎಂದು ಬಾಲಿವುಡ್ ನಟ ನವಾಬ್ ಷಾ ತಿಳಿಸಿದರು. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ಕಬ್ಜ ಚಿತ್ರ ನಿರ್ಮಿಸುತ್ತಿದ್ದಾರೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್, ಪೀಟರ್ ಹೆನ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸುತ್ತಿದ್ದಾರೆ . “ಮುಕುಂದ ಮುರಾರಿ” ಚಿತ್ರದ ನಂತರ ಉಪೇಂದ್ರ ಹಾಗೂ ಸುದೀಪ್ ಅವರು ಒಟ್ಟಾಗಿ ನಟಿಸುತ್ತಿರುವ ಚಿತ್ರ “ಕಬ್ಜ”.
ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವಾಬ್ ಷಾ, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್
Comments