ಚಿತ್ರೀಕರಣ ಆರಂಭವಾದಾಗಿನಿಂದ ಹಿಡಿದು ಈ ವರೆಗೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿರೋ ಚಿತ್ರ ಫೇಸ್ ಟು ಫೇಸ್. ಕನ್ನಡದ ಮಟ್ಟಿಗೆ ಹೊಸತನದಿಂದ ಕೂಡಿದ, ಹೊಸಾ ಪ್ರಯೋಗಗಳನ್ನು ಹೊಂದಿರೋ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ!
ರೋಹಿತ್ ಭಾನುಪ್ರಕಾಶ್ ನಾಯಕನಾಗಿ ಫೇಸ್ ಟು ಫೇಸ್ ಟ್ರೈಲರ್ ಬಿಡುಗಡೆಯಾದ ಸ್ವಲ್ಪವೇ ಸಮಯದಲ್ಲಿ ಹೆಚ್ಚು ಹೆಚ್ಚು ವೀಕ್ಷಣೆ ಪಡೆಯೋ ಮೂಲಕ ಸದ್ದು ಮಾಡಲಾರಂಭಿಸಿದೆ. ಆರಂಭದಿಂದಲೂ ನಿರ್ದೇಶಕ ಸಂದೀಪ್ ಇದೊಂದು ಭಿನ್ನ ಬಗೆಯ ಸಿನಿಮಾ ಅಂತ ಹೇಳಿಕೊಂಡೇ ಬಂದಿದ್ದರು. ಈಗ ಹೊರ ಬಂದಿರೋ ಟ್ರೈಲರ್ ಅದನ್ನು ಸಾಕ್ಷೀಕರಿಸುವಂತಿದೆ.
ಈ ಸಿನಿಮಾದಲ್ಲಿ ಪೂರ್ವಿ ಜೋಷಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಇವರೆಲ್ಲರ ಪಾತ್ರಗಳನ್ನೂ ಕೂಡಾ ಭಿನ್ನವಾಗಿಯೇ ಸಂದೀಪ್ ಕಟ್ಟಿ ಕೊಟ್ಟಿದ್ದಾರಂತೆ. ಈಗಾಗಲೇ ಇದರ ಒಂದಷ್ಟು ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಸಂದೀಪ್ ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವವರು. ಏನನ್ನೇ ಮ ಆಡಿದರೂ ಹೊಸತನ ಹೊಂದಿರ ಬೇಕೆಂಬ ಇರಾದೆ ಇಟ್ಟುಕೊಂಡಿರೋ ಉಪ್ಪಿಯಂತೆಯೇ ಸಂದೀಪ್ ಕೂಡಾ ಹೊಸಾ ಅಲೆ ಸೃಷ್ಟಿಸೋ ಸೂಚನೆ ಈ ಟ್ರೈಲರ್ ಮೂಲಕ ಸ್ಪಷ್ಟವಾಗಿದೆ.