ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿರುವವರು ವಿಜಯ್ ಸೂರ್ಯ. ಈತ ಸದರಿ ಧಾರಾವಾಹಿಯ ಮೂಲಕ ಸಿದ್ಧಾರ್ಥ್ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಇಂಥಾ ವಿಜಯ್ ಸೂರ್ಯ ಇದೀಗ ವಸಂತ್ ರಾಜಾ ನಿರ್ದೇಶನದ ಕದ್ದುಮುಚ್ಚಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನ ಎದುರುಗೊಳ್ಳುತ್ತಿದ್ದಾರೆ.
ಈ ವಾರ ಬಿಡುಗಡೆಯಾಗುತ್ತಿರೋ ಕದ್ದುಮುಚ್ಚಿ ಚಿತ್ರವನ್ನು ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಗುಳಿಕೆನ್ನೆ ಹುಡುಗನಿಗೆ ಬಿಗ್ ಬಾಸ್ ಖ್ಯಾತಿಯ ಮೇಘಶ್ರೀ ಜೋಡಿಯಾಗಿ ನಟಿಸಿದ್ದಾರೆ. ಇವರಿಬ್ಬರೂ ಕದ್ದುಮುಚ್ಚಿ ಏಲನು ಮಾಡುತ್ತಿದ್ದಾರೆ? ಈ ಸಿನಿಮನಾದಲ್ಲಿ ಇವರಿಬ್ಬರದ್ದು ಎಂಥಾ ಪಾತ್ರವೆಂಬ ಬಗ್ಗೆ ಕುತೂಹಲ ಇದ್ದೇ ಇದೆ. ಅದು ಈ ವಾರವೇ ಜಾಹೀರಾಗಲಿದೆಯಾದರೂ ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಜಾಹೀರು ಮಾಡಿದೆ.
ವಿಜಯ್ ಸೂರ್ಯ ಈ ಸಿನಿಮಾದಲ್ಲ್ಲಿ ಕಾಲಬುಡದಲ್ಲಿ ಸಂಪತ್ತು ಕೊಳೆಯುತ್ತಾ ಬಿದ್ದಿದ್ದರೂ ಪ್ರೀತಿಯನ್ನ ಅರಸಿ ಹೊರಡೋ ಹುಡುಗನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೇಘಶ್ರಿಯದ್ದು ಅಂಥಾ ಹುಡುಗನಿಗೆ ಕಾಡಿನ ಮಧ್ಯೆ ಎದುರಾಗೋ ಮಲೆನಾಡ ಅಪ್ಸರೆಯಂಥಾ ಪಾತ್ರ. ಮೇಘಶ್ರೀ ಮಲೆನಾಡಿನ ಸುಸಂಸ್ಕೃತ ಮನೆತನದ ಹುಡುಗಿಯಾಗಿ ನಟಿಸಿದ್ದಾರೆ. ಕದ್ದುಮುಚ್ಚಿ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಇದು ವಿಜಯ್ ಸೂರ್ಯ ಮತ್ತು ಮೇಘಶ್ರೀ ಪಾಲಿಗೆ ಸರಿಯಾದ್ದೊಂದು ಬ್ರೇಕ್ ನೀಡುತ್ತೆ ಅನ್ನೋ ಭರವಸೆಯ ವಾತಾವರಣವೂ ಇದೆ!
No Comment! Be the first one.