ಜಯಂ ರವಿಯವರ 24ನೇ ಸಿನಿಮಾ ಘೋಷಣೆಯಾಗಿದ್ದು, ಕೋಮಲಿ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಜಯಂ ರವಿ ಮತ್ತು ಕಾಜಲ್ ಅಗರ್ ವಾರ್ ಮೊಟ್ಟಮೊದಲ ಬಾರಿಗೆ ಜೋಡಿಯಾಗಲಾಗಿದ್ದಾರೆ. ಉಳಿದಂತೆ ಯೋಗಿ ಬಾಬು, ಕೆ.ಎಸ್. ರವಿಕುಮಾರ್, ಸಂಯುಕ್ತ ಹೆಗಡೆ, ಕವಿತಾ ಸಂಪತ್ ರಾಜ್, ನಿತಿನ್ ಸತ್ಯ, ರವಿ ಪ್ರಕಾಶ್ ಹಾಗೂ ಪಶುಪತಿ ಅಭಿನಯಿಸಲಿದ್ದಾರೆ.
ಈ ಸಿನಿಮಾವನ್ನು ಪ್ರದೀಪ್ ರಂಗನಾಥನ್ ನಿರ್ದೇಶನ ಮಾಡುತ್ತಿದ್ದು, ವೆಲ್ಸ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ನಿರ್ಮಾಣಮಾಡುತ್ತಿದೆ. ಹಿಪ್ ಹಾಪ್ ತಮಿಜಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ರಿಚರ್ಡ್ ಎಂ ನಾಥನ್ ಛಾಯಾಗ್ರಹಣದ ಜವಾಬ್ದಾರಿಯನ್ನು ವಹಿಸಿದ್ದಾರೆ. ಪ್ರವೀಣ್ ಕೆ.ಎಲ್ ಸಂಕಲನ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
No Comment! Be the first one.