ಸ್ಕ್ರೀನ್ ಮೇಲೆ ಕಲರ್ ಫುಲ್ ಆಗಿ ತೆಳ್ಳಗೆ ಬೆಳ್ಳಗೆ ಕಾಣಿಸಿಕೊಂಡ ಸೆಲೆಬ್ರೆಟಿಗಳು ಆಫ್ ಸ್ಕ್ರೀನ್ ನಲ್ಲಿ ಹಾಗೆ ಇರಲು ಸಾಧ್ಯವೆ. ಸಿನಿಮಾಕ್ಕಾಗಿ ಮಾಡಿಕೊಂಡ ಬದಲಾವಣೆಗಳು ಯಾವಾಗಲೂ ತಾತ್ಕಾಲಿಕವಾಗಿರುತ್ತದೆ. ಅಭಿಮಾನಿಗಳು ಅದನ್ನು ಶಾಶ್ವತವಾಗಿ ಬಯಸಿದರೆ ಅದು ಹೇಗೆ ಸಾಧ್ಯ. ಸಿನಿಮಾದಲ್ಲಿ ಕಲರ್ ವಿಗ್ ಹಾಕಿಕೊಂಡಿದ್ದರು ಅಂದ ಮಾತ್ರಕ್ಕೆ ರಿಯಲ್ ಲೈಫ್ ನಲ್ಲಿ ಸದಾ ವಿಗ್ ನಲ್ಲಿಯೇ ಇರಲು ಹೇಗೆ ಸಾಧ್ಯ. ರಜನಿ ಕಾಂತ್ ರವರೇ ಇದಕ್ಕೆ ಸೂಕ್ತ ಉದಾಹರಣೆ. ಸಿನಿಮಾಗಳಲ್ಲಿ ವೈವಿಧ್ಯಮಯ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಅವರು ರಿಯಲ್ ಲೈಫ್ ನಲ್ಲಿ ತಮ್ಮ ನ್ಯಾಚುರಾಲಿಟಿಯನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲಿ ಅವರಿಗೆ ಅವಮಾನವೂ ಇಲ್ಲ ಅಳುಕು ಇಲ್ಲ. ತಾನು ರಿಯಲ್ ಲೈಫ್ ನಲ್ಲೂ ಹಾಗೆ ಇರುವುದಾಗಿ ತೋರಿಸಿಕೊಂಡ ಬಹಳಷ್ಟು ಕಲಾವಿದರು ಈಗಲೂ ಕದ್ದು ಮುಚ್ಚಿಯೇ ಓಡಾಡುತ್ತಾರೆ. ಆ ವಿಷಯ ಬಿಡಿ. ಸದ್ಯ ಮೇಕಪ್ ಇಲ್ಲದ ಪೋಟೋ ಹಂಚಿಕೊಂಡು ಕಾಜಲ್ ಸುದ್ದಿಯಲ್ಲಿದ್ದಾರೆ. ಹೌದು ಮೇಕಪ್ ರಹಿತವಾಗಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಕಾಜಲ್ ಅಗರ್ ವಾಲ್ ಅವುಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ.
https://www.instagram.com/p/ByIJd9THTSO/?utm_source=ig_web_copy_link
ಮೇಕಪ್ ಇಲ್ಲದೆಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಹಾಗೂ ಪೋಟೋ ಹಂಚಿಕೊಳ್ಳುವುದಕ್ಕೆ ಧೈರ್ಯವಿರಬೇಕು.
“ವಾಸ್ತವದಲ್ಲಿ ಜನರು ಮುಖವಾಡವಿಲ್ಲದೇ ತಮ್ಮನ್ನು ತಾವು ಕಂಡುಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರೂ ಆರ್ಟಿಫಿಷಿಯಲ್ ಆಟ್ರಾಕ್ಷನ್ ನಲ್ಲಿ ಬದುಕುತ್ತಿದ್ದೇವೆ. ಅಲ್ಲದೇ ಮಾರುಹೋಗಿದ್ದೇವೆ. ಸೋಶಿಯಲ್ ಮೀಡಿಯಾ ನಮ್ಮೆಲ್ಲರ ಸ್ವಾಭಿಮಾನವನ್ನು, ನಮ್ಮತನವನ್ನು ನಂಗಿಬಿಟ್ಟಿದೆ. ಇನ್ನು ಸೌಂದರ್ಯವರ್ದಕ ಉತ್ಪನ್ನಗಳಿಗೆ ಬಿಲಿಯನ್ ಗಟ್ಟಳೆ ಹಣವನ್ನು ಖರ್ಚು ಮಾಡುವ ಮೂಲಕ ನಾವೆಲ್ಲರೂ ಸ್ವಮೋಹಕ್ಕೆ ಒಳಗಾಗುತ್ತಿದ್ದೇವೆ. ಅದರಿಂದ ನಾವು ಪರಿಪೂರ್ಣ ದೇಹಸೌಂದರ್ಯವನ್ನು ಗಳಿಸಿದ್ದೇವೆಂಬ ಪೂರ್ವಗ್ರಹ ಮನಸ್ಥಿತಿಯಲ್ಲಿದ್ದೇವೆ. ಆದರೆ ನಾನು ಆ ಗುಂಪಿನಿಂದ ಹೊರಗಿರಲು ಬಯಸುತ್ತಿದ್ದೇನೆ. ಪ್ರಯತ್ನಿಸುತ್ತಿದ್ದೇನೆ. ನಾವು ಇತರರನ್ನು ವಿಭಿನ್ನವಾಗಿ ಕಲ್ಪಿಸಿಕೊಳ್ಳುವ ಬದಲು ಇರುವಂತೆಯೇ ಸ್ವೀಕರಿಸಲು ಪ್ರಾರಂಭಿಸಿದಾಗ ಮಾತ್ರವೇ ಸಂತೋಷದ ಬದುಕನ್ನು ಪಡೆಯಲು ಸಾಧ್ಯ. ಮೇಕಪ್ ನಮ್ಮ ಬಾಹ್ಯ ವ್ಯಕ್ತಿತ್ವವನ್ನು ಸುಂದರಗೊಳಿಸುವುದೇ ವಿನಃ ಆಂತರಿಕ ಸೌಂದರ್ಯವನ್ನಲ್ಲ. ಅದು ನಮ್ಮ ಯಾಂತ್ರಿಕ ಪಾತ್ರವನ್ನು ಸೃಷ್ಟಿಸುತ್ತದೆ ಅಷ್ಟೇ. ನಾವು ಯಾರೆಂಬುದನ್ನು ವ್ಯಾಖ್ಯಾನಿಸಲಾರದು. ನಾವು ಎಷ್ಟು ಸುಮದರರಾಗಿದ್ದೇವೆಂದು ನಮ್ಮನ್ನು ಸ್ವೀಕರಿಸುವಲ್ಲಿಯೇ ನಿಜವಾದ ಸೌಂದರ್ಯ ಅಡಗಿದೆ” ಎಂದಿದ್ದಾರೆ.
https://www.instagram.com/p/ByII6BfHHdf/?utm_source=ig_web_copy_link
No Comment! Be the first one.