ಮಗಧೀರ ಚಿತ್ರದಿಂದ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಹೃದಯ ಕದ್ದಿದ್ದ ಮುಂಬೈ ಕುವರಿ ಕಾಜಲ್ ಅಗರ್ ವಾಲ್. ಸದ್ಯ ಅವಕಾಶದ ಕೊರತೆಯಿಂದ ಕಾಜಲ್ ಐಟಮ್ ಡ್ಯಾನ್ಸರ್ ಆಗುವತ್ತ ಮನಸ್ಸು ಮಾಡಿದ್ದಾರೆ. ಹೌದು ಕಾಜಲ್ ತ್ರಿವಿಕ್ರಮ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ನಿನ ಚಿತ್ರವೊಂದರಲ್ಲಿ ಐಟಂ ಸಾಂಗಿಗೆ ಮೈ ಕುಲುಕಿಸಲಿದ್ದಾರೆ.

ಈ ಹಿಂದೆ ಜೂನಿಯರ್ ಎನ್ ಟಿ ಆರ್ ನಟಿಸಿದ್ದ ಜನತಾ ಗ್ಯಾರೇಜ್ ನಲ್ಲಿ ಕುಣಿದಿದ್ದ ಕಾಜಲ್ ಪಡ್ಡೆ ಹೈಕಳಿಗೆ ಹುಚ್ಚಿಡಿಯುವಂತೆಯೂ ಮಾಡಿದ್ದರು. ಬನ್ನಿ ನಟಿಸುತ್ತಿರುವ ಹೊಸ ಸಿನಿಮಾದ ಸಾಂಗಿನಲ್ಲಿ ಕಾಜಲ್ ಏನ್ ಮೋಡಿ ಮಾಡ್ತಾರೋ ನೋಡ್ಬೇಕು.  ನಾಯಕಿಯರೇ ಐಟಂ ಸಾಂಗಿಗೆ ಕುಣಿಯುವ ಟ್ರೆಂಡು ಬಾಲಿವುಡ್ ನಿಂದ ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಗೆ ಶುರುವಾಗಿದೆ. ಸಿನಿ ಪ್ರೇಮಿಗಳಿಗೆ ನಾಯಕಿಯರ ಮೈಮಾಟವನ್ನು ನೋಡುವ ಸಂತಸ ಒಂದು ಕಡೆಯಾದರೆ, ಐಟಂ ಡ್ಯಾನ್ಸ್ ಗಳನ್ನೇ ನಂಬಿ ಬದುಕುತ್ತಿದ್ದ ಡ್ಯಾನ್ಸರ್ ಗಳಿಗೆ ಇದರಿಂದ ಹೊಡೆತ ಬೀಳದೇ ಇರಲಿಕ್ಕಿಲ್ಲ.

CG ARUN

ಮೆಗಾಸ್ಟಾರ್ ಚಿರಂಜೀವಿ ಅಳಿಯನಿಗೆ ಕಿರುಕುಳ!

Previous article

ರವಿ ಬೆಳಗೆರೆ ಒಮರ್ಟಾದಲ್ಲಿ ಅನೀಶ್

Next article

You may also like

Comments

Leave a reply

Your email address will not be published. Required fields are marked *