ಅಲ್ಲು ಅರ್ಜುನ್ ಅವರ ಆರ್ಯ 2, ಎವಡು ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ಕಾಜಲ್ ಅಗರ್ ವಾಲ್ ಸದ್ಯ ಅಲ್ಲು ಅರ್ಜುನ್ ಅವರು ನಟಿಸುತ್ತಿರುವ ಅಲ ವೈಕುಂಠಪುರಂ ಲೋ ಎಂಬ ಚಿತ್ರದ ವಿಶೇಷ ಹಾಡೊಂದಕ್ಕೆ ಕಾಜಲ್ ಅಗರ್ ವಾಲ್ ಹೆಜ್ಜೆ ಹಾಕಲಿದ್ದಾರಂತೆ. ತ್ರಿವಿಕ್ರಮ ಶ್ರೀನಿವಾಸ್ ನಿರ್ದೆಶನ ಮಾಡುತ್ತಿರುವ ಈ ಚಿತ್ರದ ಹಾಡಿನಲ್ಲಿ ನಟಿಸಲು ಸ್ವತಃ ಕಾಜಲ್ ಅವರೇ ಒಪ್ಪಿಗೆ ಸೂಚಿಸಿದ್ದು, ಚಿತ್ರೀಕರಣದಲ್ಲಿಯೂ ಭಾಗಿಯಾಗಲಿದ್ದಾರೆ.
ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಬೃಹತ್ತಾದ ಸೆಟ್ ನಿರ್ಮಾಣ ಮಾಡಲಾಗಿದೆಯಂತೆ. ಅಲ್ಲು ಅರ್ಜುನ್ ಗೆ ಪೂಜಾ ಹೆಗ್ಡೆ ನಾಯಕಿಯಾಗಿ ಜತೆಯಾಗಿದ್ದು, ಉಳಿದಂತೆ ತಬು, ಜಯರಾಂ, ಸತ್ಯರಾಜ್, ಮುರಳಿ ಶರ್ಮಾ ಮೊದಲಾದವರು ನಟಿಸಿದ್ದಾರೆ. ಚಿತ್ರದ 70ರಷ್ಟು ಚಿತ್ರೀಕರಣ ಬಹುತೇಕ ಮುಗಿದಿದ್ದು, ಇತ್ತೀಚಿಗಷ್ಟೇ ಸಿನಿಮಾ ಟೈಟಲನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಎಲ್ಲ ಅಂದುಕೊಂಡಂತಾದರೆ ಸದ್ಯದಲ್ಲಿಯೇ ಟೀಸರ್ ಬಿಡುಗಡೆಯಾಗಲಿದೆ.