ದಕ್ಷಿಣ ಭಾರತದ ಬಹುತೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಹೆಸರು ಮಾಡಿದಾಕೆ ಕಾಜಲ್ ಅಗರ್ವಾಲ್. ಇತ್ತೀಚೆಗಷ್ಟೇ ಈಕೆ ನಟಿಸಿದ್ದ ತಮಿಳಿನ ಕೋಮಾಲಿ ಮತ್ತು ತೆಲುಗಿನ ರಣರಂಗಂ ಸಿನಿಮಾಗಳು ಹಿಟ್ ಆಗಿವೆ.
ನಮ್ಮ ರಮೇಶ್ ಅರವಿಂದ್ ನಿರ್ದೇಶಿಸಿರುವ ‘ಬಟರ್ಫ್ಲೈ ಸಿನಿಮಾ ತಮಿಳಿನಲ್ಲಿ ‘ಪ್ಯಾರಿಸ್ ಪ್ಯಾರಿಸ್ ಹೆಸರಿನಲ್ಲಿ ತಯಾರಾಗಿದ್ದು ಅದೂ ಕೂಡಾ ಇನ್ನೇನು ಬಿಡುಗಡೆ ಹಂತದಲ್ಲಿದೆ. ಶಂಕರ್ ನಿರ್ದೇಶಿಸಲಿರುವ, ಕಮಲ್ ಹಾಸನ್ ಅವರ ಇಂಡಿಯನ್-೨ ಚಿತ್ರಕ್ಕೂ ಇದೇ ಕಾಜಲ್ ಅಗರ್ವಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
ಇದರ ನಡುವೆ ಜೆಫ್ರಿ ಗೀ ಚಿನ್ ನಿರ್ದೇಶನದ ಇಂಗ್ಲಿಷ್ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ದ್ವಿಭಾಷಾ ಚಿತ್ರ ‘ದಿ ಕಾಲ್ ಸೆಂಟರ್ನಲ್ಲಿಯೂ ಕಾಜಲ್ ನಟಿಸುತ್ತಿದ್ದಾಳೆ. ಪಾತ್ರ ಯವುದಾದರೂ ಅದರಲ್ಲಿ ತನ್ಮಯತೆಯಿಂದ ನಟಿಸುವ ಕಾಜಲ್ ಅಪಾರ ಅಭಿಮಾನಿ ವರ್ಗವನ್ನೂ ಹೊಂದಿದ್ದಾಳೆ.
ದಕ್ಷಿಣ ಭಾರತದಲ್ಲಿ ಹೆಸರು ಮಾಡುತ್ತಲೇ, ಹಾಲಿವುಡ್ಗೆ ಜಂಪ್ ಮಾಡಿರುವ ಕಾಜಲ್ ಪ್ರತಿಭಾವಂತೆ ಅನ್ನೋದು ನಿಜ!