ಕಾಜಲ್ ಅಗರ್ವಾಲ್ ತೆಲುಗು ತಮಿಳಿನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ. ಎರಡೂ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆಲ್ಲಾ ನಟಿಸಿ ಮನೆಮಾತಾಗಿರುವ ಕಾಜಲ್ ಅಗರ್ವಾಲ್ಗೆ ಈಗ ಮದುವೆ ಬಗ್ಗೆ ಆಸೆ ಶುರುವಾಗಿದೆಯಂತೆ. ಕಾಜಲ್ ಕಾಜಲ್ ಎಂದು ಕನವರಿಸುವ ಅವರ ಅಭಿಮಾನಿಗಳಿಗೆ ಇದರಿಂದ ದೊಡ್ಡ ಶಾಕ್ ಆಗಬಹುದೇನೋ. ಆದರೆ ತಮ್ಮ ಪುರುಷ ಅಭಿಮಾನಿಗಳಿಗೆ ಹೃದಯಾಘಾತವಾಗದಂತೆ ಸ್ವತಃ ಕಾಜಲ್ಲೇ ಮತ್ತೆ ಚುಚ್ಚುಮದ್ದು ನೀಡಿ ಅವರ ಬೇಗೆ ತಣಿಸಿದ್ದಾರೆ. ‘ಮದ್ವೆ ಆಗೋ ಆಸೆ ಇರೋದೇನೋ ನಿಜಾ ಕಣ್ರೀ. ಆದರೆ ಮುಂದುವರಿಯಲು ಧೈರ್ಯ ಸಾಲುತ್ತಿಲ್ಲ’ ಎನ್ನುತ್ತಾರೆ ಕಾಜಲ್. ಇದಕ್ಕೆ ಅವರು ತಮ್ಮ ಕೆರಿಯರ್ ಗೂ ಕಾರಣವಾಗಿ ನೀಡುತ್ತಾರೆ.
‘ಈ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಎಲ್ಲಾ ಮದ್ವೆ ಆಗಿ ಸೆಟ್ಲಾಗುತ್ತಿರುವುದನ್ನ ನೋಡಿ ನನಗೂ ಮದ್ವೆ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅನ್ನಿಸಿತು. ಪ್ರೀತಿಸುವ ಗಂಡ, ಬೆಚ್ಚನೆಯ ಸಂಸಾರ, ಸುಂದರವಾದ ಮನೆ- ಪುಟಾಣಿ ಮಕ್ಕಳು.. ಎಲ್ಲವನ್ನೂ ಆರೈಕೆ ಮಾಡಿಕೊಂಡು ಹಾಯಾಗಿರಬಹುದು. ಆದರೆ ಕೆರಿಯರ್ ನೋಡಿಕೊಂಡರೆ ಈಗಲೇ ಮದ್ವೆ-ಗಿದ್ವೆ ಬೇಡ ಅನ್ನಿಸುತ್ತದೆ. ಸದ್ಯಕ್ಕೆ ನನ್ನ ಕೆರಿಯರ್ ಪೀಕ್ನಲ್ಲಿದೆ. ಇಂಥ ಹೊತ್ತಿನಲ್ಲಿ ಮದ್ವೆ ಆಗಿ ಒಂದಷ್ಟು ವರ್ಷ ಕಳೆದುಹೋಗಿಬಿಡುವುದು ಎಷ್ಟರ ಮಟ್ಟಿಗೆ ಸರಿ ಅಂತ ನನಗೆ ನಾನೆ ಪ್ರಶ್ನೆ ಮಾಡಿಕೊಂಡಿದ್ದೀನಿ. ಸೋ, ಮದ್ವೆ ಕನಸಿಗೆ ಸದ್ಯಕ್ಕೆ ಬ್ರೇಕ್ ನೀಡಲಾಗಿದೆ..’
ಕಾಜಲ್ ಅಗರ್ವಾಲ್ಗೆ 2018ರಲ್ಲಿ ಅಂಥ ದೊಡ್ಡ ಹಿಟ್ ಸಿಕ್ಕಲಿಲ್ಲ ಎನ್ನುವುದು ನಿಜವಾದರೂ, ಅವಕಾಶಗಳಿಗೇನು ಕೊರತೆ ಇರಲಿಲ್ಲ. ಈ ನಡುವೆ ಅನಾರೋಗ್ಯಕ್ಕೀಡಾದ ಕಾಜಲ್ ಮೂರು ತಿಂಗಳು ಬೆಡ್ರೆಸ್ಟ್ ನಲ್ಲಿದ್ದರು.. ಆ ನೋವನ್ನ ಮರೆತಿರೋ ಕಾಜಲ್ 2019ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕ್ವೀನ್ ಚಿತ್ರದ ತಮಿಳು ಅವತರಣಿಕೆ (ಕನ್ನಡದಲ್ಲಿ ಬಟರ್ ಪ್ಲೈ) ಇನ್ನೇನು ರಿಲೀಸಾಗುತ್ತಿದೆ. ಕವಚಂ ಸಿದ್ಧವಾಗುತ್ತಿದೆ. ಇಂಡಿಯನ್ 2 ಚಿತ್ರದಲ್ಲೂ ಕಾಜಲ್ ಅಭಿನಯಿಸುತ್ತಿದ್ದಾರೆ. ಹೀಗಾಗಿ 2019ರಲ್ಲಿ ಮತ್ತೆ ಫಾರ್ಮ್ಗೆ ಬರೋ ಜೋಶ್ ವ್ಯಕ್ತಪಡಿಸುತ್ತಾರೆ ಕಾಜಲ್.
ಸೋ, ಕಾಜಲ್ ಕನವರಿಕೆಯಲ್ಲಿರೋ ಅವರ ಅಭಿಮಾನಿಗಳು ಇನ್ನೊಂದು ವರ್ಷ ನಿರಾಳವಾಗಿರಬಹುದು. ನೋ ಶಾದಿ ನೋ ವ್ಯಾಧಿ!