“ಪ್ರತಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೆ. ಅವಳಿಂದ ಹುಡುಗನ ಜೀವನ ಚನ್ನಾಗಿರ್ತದಂತೆ…” ಇದು ಯೋಗರಾಜ್ ಭಟ್ರು ಬರೆದಿರುವ ಹೊಸಾ ಹಾಡು. ಭಟ್ಟರ ಫಿಲಾಸಫಿ ಸಾಂಗನ್ನು ನವೀನ್ ಸಜ್ಜು ದನಿಯಲ್ಲಿ ಕೇಳೋದೇ ಒಂಥರಾ ಮಜವಾಗಿದೆ. ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ಅಭಿನಯದ ಖಾಕಿ ಚಿತ್ರಕ್ಕಾಗಿ ಋತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯ ಈ ಹಾಡು ಹುಡುಗರ ಪಾಲಿನ ರಾಷ್ಟ್ರಗೀತೆಯಾಗೋದು ಖಚಿತ. ಈ ಹಾಡಿಗೆ ಗಿಟಾರು ನುಡಿಸಿರುವ ಜೈರಾಮಯ್ಯ ಮತ್ತು ಚರಣ್ ರಾವ್ ಪಡ್ಡೆ ಹುಡುಗರು ಎದ್ದೆದ್ದು ಕುಣಿಯುವ ರೇಂಜಿಗೆ ತಂತಿಗಳನ್ನು ಮೀಟಿದ್ದಾರೆ. ಲಹರಿ ಆಡಿಯೋ ಈ ಚಿತ್ರದ ಹಾಡುಗಳ ಹಕ್ಕು ಪಡೆದಿದೆ.

  1. ಚಿರಂಜೀವಿ ಸರ್ಜಾ ನಟನೆಯ ಈ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ದಿ ಪವರ್ ಆಫ್ ಕಾಮನ್ ಮ್ಯಾನ್ ಎನ್ನುವ ಅಡಿಬರಹ ಹೊಂದಿರುವ ಸಿನಿಮಾ ಚಿರಂಜೀವಿ ಸರ್ಜಾ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡೋದು ಗ್ಯಾರೆಂಟಿ ಎನ್ನುವುದಕ್ಕೆ ಈಗಾಗಲೇ ರಿಲೀಸಾಗಿರುವ ಪೋಸ್ಟರ್, ಹಾಡು ಮತ್ತು ಹಾಡುಗಳಿಗಿಂತಾ ಬೇರೆ ಕುರುಹುಗಳು ಬೇಕಿಲ್ಲ. ತಾನ್ಯಾ ಹೋಪ್ ಈ ಚಿತ್ರದ ನಾಯಕಿ. ಕೇಬಲ್ ಆಪರೇಟರ್ ಯುವಕನಿಂದ ಕತೆ ಆರಂಭಗೊಂಡು ಯಾರೂ ಊಹೆ ಮಾಡಲಾರದ ತಿರುವುಗಳ ಸುತ್ತ ಖಾಕಿ ಬೆಸೆದುಕೊಂಡಿದೆಯಂತೆ. ಈಗ ರಿಲೀಸಾಗಿರುವ ಪ್ರತಿಯೊಬ್ಬ ಹುಡುಗರ ಹಿಂದೆ ಹಾಡು ಕೂಡಾ ಖಾಕಿ ಸಿನಿಮಾದಲ್ಲಿ ಜನರಿಗೆ ಹತ್ತಿರವಾಗುವ ಅಂಶಗಳಿವೆ ಅನ್ನೋದನ್ನು ಸಾರಿ ಹೇಳಿದೆ.

ಬಾಲಾ ಛಾಯಾಗ್ರಹಣ, ವಿನೋದ್ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಮಾಸ್ತಿ, ಗುರುರಾಜ ದೇಸಾಯಿ ಸಂಭಾಷಣೆ, ಋತ್ವಿಕ್ ಸಂಗೀತ ಸೇರಿದಂತೆ ಎಲ್ಲ ಹೆಸರು ಮಾಡಿರುವ ತಂತ್ರಜ್ಞರು ಖಾಕಿಯಲ್ಲಿ ಒಟ್ಟು ಸೇರಿದ್ದಾರೆ. ಈ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಅವರ ಪಾಲಿಗಿದು ಚೊಚ್ಚಲ ಸಿನಿಮಾ. ಆದರೆ ಈ ಹಿಂದೆ ಇದೇ ತರುಣ್ ಟಾಕೀಸ್ ನಿರ್ಮಿಸಿದ್ದ ರೋಜ಼್ ಮತ್ತು ಮಾಸ್ ಲೀಡರ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಸಂಗಮ ಮತ್ತು ಕೂಲ್ ಚಿತ್ರಗಳೂ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ಪ್ರಜೆ ಕೂಡಾ ತಮ್ಮ ರಕ್ಷಣೆಯನ್ನು ತಾವೇ ಹೇಗೆ ಮಾಡಿಕೊಳ್ಳಬಹುದು ಎಂಬುದರ ಸುತ್ತ ವಿದ್ಯಾಧರ್ ಹೆಣೆದಿರುವ ಕಥೆಯನ್ನು ನವೀನ್ ರೆಡ್ಡಿ ರೋಚಕವಾಗಿ ರೂಪಿಸಿದ್ದಾರೆ. ಸದ್ಯಕ್ಕೆ ಹುಡುಗ ಹಾಡು ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ!

CG ARUN

ಬಬ್ರೂ ಜೊತೆಗಿನ ಬ್ಯೂಟಿಫುಲ್‌ ಜರ್ನಿ

Previous article

ರವಿಚಂದ್ರನ್ ಮಗ ಅನ್ನೋದು ಬೆನ್ನಿಗಿರುವ ಶಕ್ತಿ ಅಷ್ಟೇ… ಮಿಕ್ಕಿದ್ದೆಲ್ಲಾ ನಾನೇ ಪಡೆಯಬೇಕು!!

Next article

You may also like

Comments

Leave a reply

Your email address will not be published. Required fields are marked *