ಬಾಲಿವುಡ್ ಗಮನಸೆಳೆಯುತ್ತಿವೆ ’ಕಳಂಕ್’ ಫಸ್ಟ್ ಲುಕ್ ಪೋಸ್ಟರ‍್ಸ್ !

ಅಭಿಷೇಕ್ ವರ್ಮನ್ ನಿರ್ದೇಶನದ ಬಹುನಿರೀಕ್ಷಿತ ’ಕಳಂಕ್’ ಹಿಂದಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಬಾಲಿವುಡ್‌ನ ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳಾದ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮತ್ತು ನಾಡಿಯಾವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೇನ್‌ಮೆಂಟ್ ಜೊತೆಗೂಡಿ ನಿರ್ಮಿಸುತ್ತಿರುವ ದೊಡ್ಡ ಚಿತ್ರವಿದು. ಇಲ್ಲಿಯವರೆಗೆ ಸಂಜಯ್ ದತ್, ವರುಣ್ ಧವನ್, ಆದಿತ್ಯ ರಾಯ್ ಕಪೂರ್ ಮತ್ತು ಅಲಿಯಾ ಭಟ್ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದವು. ಇದೀಗ ಸೋನಾಕ್ಷಿ ಸಿನ್ಹಾ ಫಸ್ಟ್ ಲುಕ್ ರಿವೀಲ್ ಆಗಿದೆ. ಇನ್ನು ಚಿತ್ರದ ಪ್ರಮುಖ ತಾರೆ ಮಾಧುರಿ ದೀಕ್ಷಿತ್ ಅವರ ಲುಕ್ ಹೊರಬೀಳಬೇಕಿದೆ.

 

’ಹ್ಯಾಪಿ ಫಿರ್ ಭಾಗ್ ಜಾಯೇಗಿ’ ಹಿಂದಿ ಚಿತ್ರದಲ್ಲಿ ಪಂಜಾಬಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸೋನಾಕ್ಷಿ ಸಿನ್ಹಾ ’ಕಳಂಕ್’ನಲ್ಲಿ ’ಸತ್ಯಾ ಚೌಧರಿ’ ಪಾತ್ರದಲ್ಲಿದ್ದಾರೆ. ಪೀರಿಯಡ್ ಡ್ರಾಮಾ ಚಿತ್ರದಲ್ಲಿ ಸೋನಾಕ್ಷಿ ಲುಕ್ ಚಾರ್ಮಿಂಗ್ ಆಗಿದೆ. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್, ಆಕೆ ಪವಿತ್ರಳು, ಆಕೆಯಲ್ಲಿ ಪ್ರೀತಿಯೇ ತುಂಬಿದೆ ಎಂದು ಟ್ವೀಟ್ ಮಾಡಿದ್ದಾರೆ. ನಟಿ ಮಾಧುರಿ ದೀಕ್ಷಿತ್, ಆಕೆಯದ್ದು ಸಾಗರದಂತಹ ಪ್ರೀತಿ ಎಂದಿದ್ದರೆ, ನಟಿ ಅಲಿಯಾ ಭಟ್, ಕುಟುಂಬದ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯುವತಿ ಎಂದು ಟ್ವೀಟಿಸಿದ್ದಾರೆ. ’ಕಳಂಕ್’ ಅಲ್ಲದೆ ಸೋನಾಕ್ಷಿ ಕೈಲೀಗ ಮತ್ತೆರೆಡು ದೊಡ್ಡ ಸಿನಿಮಾಗಳಿವೆ. ಅಕ್ಷಯ್ ಕುಮಾರ್ ಜೋಡಿಯಾಗಿ ’ಮಿಷನ್ ಮಂಗಲ್’ ಮತ್ತು ಸಲ್ಮಾನ್ ಖಾನ್‌ರ ’ದಬಾಂಗ್ ೩’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ’ಕಳಂಕ್’ ಇದೇ ಏಪ್ರಿಲ್‌ನಲ್ಲಿ ತೆರೆಕಾಣಲಿದೆ.


Posted

in

by

Tags:

Comments

Leave a Reply