ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅರ್ಪಿಸುವ, ಭುವನ್ ಮೂವೀಸ್ ನಿರ್ಮಾಣದ, ಕೆಂಡಸಂಪಿಗೆ, ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ನಾಯಕನಾಗಿ ನಟಿಸೋದರ ಜೊತೆಗೆ ನಿರ್ದೇಶಿಸಿರುವ ಚೊಚ್ಚಲ ಚಿತ್ರ ಕಾಲಾಪ್ಥರ್. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ನಿರ್ದೇಶನಕ ಸೂರಿ ಹಾಗೂ ಯೋಗರಾಜ್ ಭಟ್ ಕೈ ಕೆಳಗೆ ಪಳಗಿದ ಪ್ರತಿಭೆ ವಿಕ್ಕಿ ವರುಣ್, ಅವತ್ತು ಉದ್ಯಮಕ್ಕೆ ಕಾಲಿಟ್ಟಿದ್ದೇ ನಿರ್ದೇಶಕನಾಗಲು. ಆದ್ರೆ ನಾಯಕನಟನಾಗಿ ಎರಡು ಚಿತ್ರ ಮಾಡಿ ಗೆದ್ದು, ಈಗ ಮೂರನೇ ಚಿತ್ರಕ್ಕೆ ನಟನೆಯ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ.
ಚಿತ್ರದ ನಾಯಕಿಯಾಗಿ ಧನ್ಯ ರಾಮ್ ಕುಮಾರ್ ಅಭಿನಯಿಸಿದ್ದು, ಧನ್ಯ ಪಾತ್ರದ ಫಸ್ಟ್ ಲುಕ್ ನ ವರನಟ ಡಾ.ರಾಜ್ ಕುಮಾರ್ ಜನ್ಮ ದಿನದಂದು ಅಂದ್ರೆ ಏಪ್ರಿಲ್ 24ರಂದು ಬಿಡುಗಡೆಯಾಗಲಿದೆ. ಕಾಲಾಪ್ಥರ್ ಸತ್ಯಪ್ರಕಾಶ್ ಬರೆದಿರುವ ಕಥೆ .ಒಂದು ಗಟ್ಟಿ ಕಥೆಯನ್ನಿಟ್ಟುಕೊಂಡು ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿ ವಿಕ್ಕಿ ಕಾಲಾಪ್ಥರ್ ನ ಕಟ್ಟಿಕೊಡೋ ಪ್ರಯತ್ನ ಮಾಡದ್ದಾರಂತೆ.
ಈ ಚಿತ್ರವನ್ನ ನಿರ್ದೇಶನದೊಂದಿಗೆ ನಟಿಸಿರೋ ವಿಕ್ಕಿ, ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆಗಿರೋ ಪೋಸ್ಟರ್, ಟೈಟಲ್ ಮತ್ತು ವಿಕ್ಕಿ ಲುಕ್ ಸಿನಿಮಾ ಮೇಲಿನ ಕುತೂಹಲವನ್ನ ಹೆಚ್ಚಿಸ್ತಿದೆ. ಜೊತೆಗೆ ವರ್ಕಿಂಗ್ ಸ್ಟಿಲ್ ಗಳಲ್ಲಿ ವಿಕ್ಕಿ ಧನ್ಯ ಕಾಂಬಿನೇಷನ್ ಆಕರ್ಷಕವಾಗಿದೆ.
ಹಿರಿಯನಟ ನಿರ್ದೇಶಕ ನಾಗಭರಣ, ರಾಜೇಶ್ ನಟರಂಗ , ಕೆ.ಜಿ.ಎಫ್ ಸಂಪತ್ ಸೇರಿದಂತೆ ಪ್ರತಿಭಾವಂತ ತಾರಾಬಳಗ ಈ ಚಿತ್ರಕ್ಕಿದೆ. ಸಂದೀಪ್ ಕುಮಾರ್ ಛಾಯಾಗ್ರಹಣವಿರೋ ಕಾಲಾಪ್ಥರ್ ಗೆ ಅನೂಪ್ ಸಿಳೀನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಬಿಜಾಪುರದ ಜೈನಾಪುರ , ಜಮ್ಮು ಕಾಶ್ಮೀರ, ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರದ ಟಾಕಿ ಪೋರ್ಷನ್ ಮುಕ್ತಾಯಗೊಂಡಿದೆ.
ಇನ್ನೊಂದು ಸಾಹಸ ಸನ್ನಿವೇಷವನ್ನ ಚಿತ್ರೀಕರಿಸಿ, ಕಾಲಾಪ್ಥರ್ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆಯೋ ಪ್ಲಾನ್ ನಲ್ಲಿರೋ ಚಿತ್ರತಂಡ. ಜೂನ್ ನಲ್ಲಿ ಪ್ರೇಕ್ಷಕರೆದುರಿಗೆ ಬರೋ ಸನ್ನಾಹದಲ್ಲಿದೆ. ಸುರೇಶ್, ನಾಗರಾಜ್ (ಬಿಲ್ಲಿನ ಕೋಟೆ) ಸ್ನೇಹಿತರು ಜತೆಗೂಡಿ ನಿರ್ಮಿಸ್ತಿರೋ ಕಾಲಾಪ್ಥರ್ ಹಲವಾರು ವಿಶೇಷತೆಗಳನ್ನ ಹೊಂದಿದ್ದು, ಇಲ್ಲಿಂದ ಒಂದೊಂದೇ ವಿಚಾರವನ್ನ ಹೊರ ಬಿಡೋ ಮೂಲಕ ಪ್ರಚಾರ ಮಾಡಲು ಹೊರಟಿದೆ ಚಿತ್ರತಂಡ.
Comments