ಕಿರಿಕ್ ಪಾರ್ಟಿ ಖ್ಯಾತಿಯ ಶಂಕರ್ ಮೂರ್ತಿ ಹಾಗೂ ಜೀ ಕನ್ನಡದ ಸೂಪರ್ ಹಿಟ್ ಧಾರವಾಹಿ ಕಮಲಿ ಖ್ಯಾತಿಯ ಯಶಸ್ವಿನಿ ರವೀಂದ್ರ ನಟಿಸಿರುವ ಸಿನಿಮಾ ಕಾಲವೇ ಮೋಸಗಾರ. ಈ ಸಿನಿಮಾವನ್ನು ಸಂಜಯ್ ವದತ್ ಎಸ್ ನಿರ್ದೇಶನ ಮಾಡುತ್ತಿದ್ದು, ಭಾವಸ್ಪಂದನ ಮತ್ತು ಬಿ ಎಂ ಡಬ್ಲ್ಯೂ ಪ್ರೊಡಕ್ಷನ್ ನಲ್ಲಿ ರಜತ್ ದುರ್ಗೋಜಿ ಸಾಲಂಕೆ ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಇತ್ತೀಚಿಗಷ್ಟೇ ಕಾಲವೇ ಮೋಸಗಾರ ಚಿತ್ರದ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಶ್ರೀ ಗಣೇಶ್ ವಿಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ಪೋಸ್ಟರ್ ಪಕ್ಕಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದ್ದು, ನಾಯಕಿ ಯಶಸ್ವಿನಿ ಗನ್ ನಿಂದ ಶೂಟ್ ಮಾಡುತ್ತಾರೆ. ಬುಲೆಟ್ ಹೊರಬಂದು ಸಾಗುವಾಗಲೇ ಚಿತ್ರದ ತಾಂತ್ರಿಕ ವರ್ಗದವರ ಟೈಟಲ್ ಕ್ರೆಡಿಟ್ ಗಳನ್ನು ಡಿಫರೆಂಟಾಗಿ ತೋರಿಸಲಾಗಿದೆ. ಟೀಸರ್ ಎಸ್ ಎಫ್ ಎಕ್ಸ್ ನೋಡುಗರನ್ನು ಆಕರ್ಷಿಸುವಂತಿದ್ದು, ಮೋಷನ್ ಪೋಸ್ಟರ್ ಡಿಸೈನ್ ಕೂಡ ಗಮನಸೆಳೆಯುವಂತಿದೆ. ಚಿತ್ರದ ತಾರಾಗಣದಲ್ಲಿ ಭರತ್ ಸಾಗರ್, ಯಶಸ್ವಿನಿ ರವೀಂದ್ರ  ಸೇರಿದಂತೆ ಶಂಕರ್ ಮೂರ್ತಿ, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ದನ್, ದರ್ಶನ್ ವರ್ನೆಕಾರ್, ಮುರಳಿ ಹಾಸನ್, ಆಶಾ ಸುಜಯ್ ಮತ್ತಿತರರಿದ್ದಾರೆ. ಇನ್ನು ಕ್ರಾಂತಿ ಕುಮಾರ್ ಕೋನಿಡೇಲಾ ಛಾಯಾಗ್ರಹಣ, ಲೋಕೆಶ್ ಕೆ ಸಂಗೀತ, ರಿತ್ವಿಕ್ ಸಂಕಲನ, ಸಂಜಯ್ ವದತ್ ಸಂಭಾಷಣೆ ಚಿತ್ರಕ್ಕಿದೆ.

CG ARUN

ಕನ್ನಡ ಚಿತ್ರರಂಗದ ನಿಶ್ಚಲ ನಾಯಕನಟ ನಿಖಿಲ್

Previous article

ಪೈಲ್ವಾನ್ ಆಡಿಯೋ ರಿಲೀಸ್ ಪವರ್ ಸ್ಟಾರ್ ಕೈನಲ್ಲಿ!

Next article

You may also like

Comments

Leave a reply

Your email address will not be published. Required fields are marked *