ಈ ಹಿಂದಿನ ಕಾಲಘಟ್ಟವನ್ನು ಗಮನಿಸಿದರೆ ಚಂದನವನದಲ್ಲಿ ಭಕ್ತಿ ಆಧಾರಿತ ಸಿನಿಮಾಗಳ ಸಂಖ್ಯೆಯೇ ಹೆಚ್ಚಾಗಿತ್ತು. ಒಂದರ ಹಿಂದೆ ಒಂದರಂತೆ ದೇವರ ಸಿನಿಮಾಗಳನ್ನು ರಿಲೀಸ್ ಮಾಡಲಾಗುತ್ತಿದೆ. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಿದ್ದೇವೆ. ದೇವರ ಹಿಂದೆ ಬಿದ್ದಿದ್ದವರೆಲ್ಲ ಸದ್ಯ ದೆವ್ವ ಭೂತಗಳ ಹಿಂದೆ ಬಿದ್ದಿದ್ದಾರೆ. ದೇವರ ಸಿನಿಮಾಗಳು ರಿಲೀಸ್ ಆಗುತ್ತಿದ್ದ ಕಾಲ ಹೋಗಿ ದೆವ್ವದ ಸಿನಿಮಾಗಳೇ ಹೆಚ್ಚೆಚ್ಚು ರಿಲೀಸ್ ಆಗುತ್ತಿದೆ. ಅದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆ ಕೂಡ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕವೇ ಥ್ರಿಲ್ಲಿಂಗ್ ಅಂಶಗಳನ್ನಿಟ್ಟುಕೊಂಡು ಪ್ರೇಕ್ಷಕರಲ್ಲಿ ಭಯ ಹುಟ್ಟಿಸಲು ಬರುತ್ತಿರುವ ಹೊಸ ಸಿನಿಮಾ ಕಮರೊಟಟು ಚೆಕ್ ಫೋಸ್ಟ್.

ಪ್ಯಾರಾನಾರ್ಮಲ್ ಸಿನಿಮಾ ಇದಾಗಿದ್ದು, ಬೇರೆ ಸಿನಿಮಾಗಳಂತೆ ಎಲ್ಲಿ ಕಣ್ಣು ಬಿಟ್ಟಲು ದೆವ್ವ ಭೂತಗಳು ಕಾಣಿಸೋದಿಲ್ಲ. ಆದರೆ ಭೂತ ಇದೆಯೆನ್ನುವ ಫೀಲ್ ಮಾತ್ರ ಅಗಾಧವಾಗಿ ದೊರೆಯಲಿದೆಯಂತೆ. ತಿಥಿ ಖ್ಯಾತಿಯ ಗಡ್ಡಪ್ಪ ಹೊಸ ಲುಕ್ ನಲ್ಲಿರುವುದು ಕಮರೊಟ್ಟಿನ ಸ್ಪೆಷಲ್. ಪ್ರೇಕ್ಷಕರ ನಿರೀಕ್ಷೆ, ಲಾಜಿಕ್ ಮೀರಿ ಸಿನಿಮಾವನ್ನು ಹೆಣೆಯಲಾಗಿದ್ದು, ಕ್ಯಾಂಡಿಡ್ ಫೋಟೋ ತೆಗೆಯೋ ಮಾದರಿಯಲ್ಲಿ ಸ್ಪೆಷಲ್ ಆಗಿ ಭೂತಕೋಲ ಹಾಡನ್ನು ಯಾರಿಗೂ ಗೊತ್ತಿಲ್ಲದೇ ಶೂಟ್ ಮಾಡಲಾಗಿದೆಯಂತೆ. ಇನ್ನು ಎ.ಟಿ.ರವೀಶ್ ರು ಸಂಗೀತ ಸಂಯೋಜನೆ ಮಾಡಿರುವ 25 ಚಿತ್ರ ಇದಾಗಿದ್ದು, ನಿರ್ದೇಶಕ ಕಮ್ ನಟ ನವೀನ್ ಕೃಷ್ಣ ತುಳು ಭಾಷೆಯ ಹಾಡೊಂದನ್ನು ಹಾಡಿದ್ದಾರೆ. ವಿಭಿನ್ನ ಹಾರರ್ ಬೇಸ್ಡ್ ಸಿನಿಮಾ ಕಮರೊಟ್ಟು ಪ್ರೇಕ್ಷಕರಲ್ಲಿ ದಿಗಿಲು ಹುಟ್ಟಿಸುವುದರಲ್ಲಿ ಅನುಮಾನವಿಲ್ಲ.

CG ARUN

ಬಿಲ್ ಕಟ್ಟಲು ಬರುತ್ತಿದ್ದಾರೆ ಬಿಗ್ ಬಾಸ್ ಆ್ಯಂಡಿ!

Previous article

ನೆರವೇರಿತು ಸಲಗ ಸಿನಿಮಾದ ಸ್ಕ್ರಿಪ್ಟ್ ಪೂಜೆ

Next article

You may also like

Comments

Leave a reply

Your email address will not be published. Required fields are marked *