ಸಿಂಧು ಲೋಕನಾಥ್ ನಟನೆಯ ಕಾಣದಂತೆ ಮಾಯವಾದನು ಚಿತ್ರ ಇದೇ ತಿಂಗಳ ೩೧ಕ್ಕೆ ತೆರೆಗೆ ಬರುತ್ತಿದೆ. ಇದುವರೆಗೂ ನಟನೆಗೆ ಚಾಲೆಂಜ್ ಅನ್ನಿಸುವಂಥಾ, ಹೊಸತನವಿರೋ ಪಾತ್ರಗಳನ್ನೇ ಒಪ್ಪಿಕೊಂಡು ಬಂದಿರೋ ಸಿಂಧು, ಈ ಚಿತ್ರವನ್ನೂ ಅದೇ ಮಾನದಂಡದಲ್ಲಿ ಒಪ್ಪಿಕೊಂಡಿದ್ದರು. ಈ ಚಿತ್ರ ಸಿಂಧೂ ಸೆಕೆಂಡ್ ಇನ್ನಿಂಗ್ಸ್’ಗೆ ಭರ್ಜರಿ ಓಪನಿಂಗ್ ಕೊಡಲಿದೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಈ ಬಗ್ಗೆ ಸಿಂಧೂ ಏನಂತಾರೆ…?
ಒಂದು ಸಿನಿಮಾಗೆ ಬೇಕಿರುವಂತಹ ಎಲ್ಲಾರೀತಿಯ ವೈವಿಧ್ಯತೆಗಳೂ ಕಾಣದಂತೆ ಮಾಯವಾದನು ಚಿತ್ರದಲ್ಲಿವೆ. ಎಲ್ಲಾ ವಯೋಮಾನದವರೂ ನೋಡುವಂತಹ ಚಿತ್ರ. ಅದರಲ್ಲೂ ಮಕ್ಕಳು ಹೆಚ್ಚು ಇಷ್ಟಪಡುವಂತದ್ದು. ಚಿತ್ರದ ಪ್ರಕಿಯೆ ಬಹಳಷ್ಟಿದ್ದುದರಿಂದ ಸಿನಿಮಾ ರಿಲೀಸ್ ಮಾಡಲು ಹೆಚ್ಚು ಸಮಯಾವಕಾಶ ಬೇಕಾಯಿತು. ಇಡೀ ಚಿತ್ರತಂಡ ಸುಮಾರು ೯-೧೦ ವರ್ಷಗಳಿಂದ ಪರಿಚಯ.
ಇದು ನನ್ನ ಟೀಂ ಅಂತಲೇ ಹೇಳಬಹುದು. ವಿಕಾಸ್ ಅವರು ನನಗೆ ಡ್ರಾಮಾ ಸಿನಿಮಾ ಸಂದರ್ಭದಲ್ಲಿ ಪರಿಚಯವಾಗಿದ್ದರು. ವಿಕಾಸ್ ಹಾಗೂ ರಾಜ್ ಅವರು ಒಮ್ಮೆ ನಮ್ಮ ಮನೆಗೆ ಬಂದು ಕಾಣದಂತೆ ಮಾಯವಾದನು ಚಿತ್ರದ ಕಥೆಯನ್ನು ಹೇಳಿದ್ದರು. ಆದರೆ ಕಥೆ ಸ್ವಲ್ಪವೂ ನಾನು ಅರ್ಥ ಮಾಡಿಕೊಂಡಿರಲಿಲ್ಲ ಆದ್ರೂ ಸಿನಿಮಾದಲ್ಲಿ ನಟಿಸೋದಕ್ಕೆ ಒಪ್ಪಿಕೊಂಡಿದ್ದೆ. ಮೊದಲ ದಿನ ಶೂಟಿಂಗ್ ಸ್ಪಾಟ್ಗೆ ಹೋದಾಗ ಸೀನ್ ಬಗ್ಗೆ ಬಹಳ ಗೊಂದಲದಲ್ಲಿದ್ದೆ. ಆಗ ವಿಕಾಸ್ ಅವರು ಈಗಾಗಲೇ ನಿಮ್ಮನೆಗೆ ಬಂದು ೩ ಗಂಟೆಗಳು ಚಿತ್ರದ ಕಥೆ ಹೇಳಿದ್ವಿ. ನಿಮಗೆಲ್ಲಾ ಮರೆತು ಹೋಯಿತಾ ಅಂದ್ರು.
ರಾಜ್ ಅವರು ಏನ್ ಕನಸು ಕಾಣುತ್ತಾರೋ ಅದನ್ನ ನಾವು ಸಿನಿಮಾದಲ್ಲಿ ನೋಡಬಹುದು. ಅವರ ಬಹಳ ಡೆಡಿಕೇಟೆಡ್ ಪರ್ಸನ್ ಅಂತ ಹೇಳಬಹುದು. ಫ್ಯಾಂಟಸಿ ಸಿನಿಮಾದ ಅತಿದೊಡ್ಡ ಅಭಿಮಾನಿ ಅವರು. ಆಕ್ಷನ್ಗಳನ್ನ ತೆಲುಗು ಸಿನಿಮಾ ಸ್ಟೈಲ್ನಲ್ಲಿ ಮಾಡಿದ್ದಾರೆ. ಪ್ರತಿ ಶೂಟಿಂಗ್ಆದ ಮೇಲೂ ಸ್ವಲ್ಪ ಅವರಿಗೆ ಸರಿ ಅನ್ನಿಸಿಲ್ಲ ಅಂದ್ರೂ ಸಹ ಸೀನ್ ಚೇಂಜ್ ಮಾಡಿ ಮತ್ತೆರೀ-ಶೂಟ್ ಮಾಡುತ್ತಿದ್ದರು. ಈ ಚಿತ್ರದಲ್ಲಿ ಬಹಳಷ್ಟು ಶಾಟ್ಗಳನ್ನ ರೀ-ಶೂಟ್ ಮಾಡಿದ್ದೇವೆ. ಅವರಿಗೆ ಸರಿ ಅನ್ನಿಸುವವರೆಗೂ ಬಿಡುತ್ತಿರಲಿಲ್ಲ. ಈ ಚಿತ್ರದಲ್ಲಿ ಒಬ್ಬ ಮೆಚ್ಯೂರ್ಡ್ ಹಾಗೂ ಹೆಲ್ಪಿಂಗ್ ನೇಚರ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲನೇ ಬಾರಿಗೆ ಫ್ಯಾಂಟಸಿ ಸಿನಿಮಾವೊಂದರಲ್ಲಿ ನಟಿಸಿದ್ದೇನೆ.
No Comment! Be the first one.