ಯುವ ನಿರ್ದೇಶಕ ರಾಧಾ ಅವರ ನಿರ್ದೇಶನದ  ಖನನ ಎಂಬ ಥ್ರಿಲ್ಲರ್  ಚಿತ್ರದ ಮೂಲಕ  ಮಾಸ್ ಹೀರೋ ಆಗಿ ಹೊರಹೊಮ್ಮಿದ್ದ  ನಾಯಕ ಆರ್ಯವರ್ಧನ್ ಈಗ ಖುಷಿಯ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ, ಆರ್ಯ ಅಭಿನಯಿಸಿದ ಮೊದಲ ಚಿತ್ರ ಖನನ  50 ದಿನ  ಪೂರೈಸಿದೆ. ಸಹಜವಾಗಿಯೇ ಅದು ಅವರ ಸಂತಸಕ್ಕೆ ಕಾರಣವಾಗಿದೆ. ಅವರ ತಂದೆ ಶ್ರೀನಿವಾಸ್ ರಾವ್  ನಿರ್ಮಾಣದ  ಚಿತ್ರವಿದು.

ಮೊದಲ ಚಿತ್ರದ ಮಂದಹಾಸ ಬೀರಿರುವ ನಾಯಕ  ಆರ್ಯವರ್ಧನ್ ಈಗ ಮತ್ತೂಂದು ಹೊಸ ಚಿತ್ರದಲ್ಲಿ  ನಾಯಕನಾಗಿ  ಕಾಣಿಸಿಕೊಳ್ಳುತ್ತಿzರೆ. ಹೌದು, ಖನನ  ಚಿತ್ರದ  ಬಳಿಕ ಆರ್ಯವರ್ಧನ್  ಈಗ ಹೊಸ ಚಿತ್ರವನ್ನು  ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೂ ಅವರ ತಂದೆ ಶ್ರೀನಿವಾಸ್‌ ರಾವ್ ಅವರೇ ನಿರ್ಮಾಪಕರು ಎನ್ನುವುದು ಇಲ್ಲಿ  ವಿಶೇಷ. ಇನ್ನು, ಈ ಚಿತ್ರವನ್ನು ರಾಹುಲ್ ಈರಯ್ಯ  ಎಂಬುವವರು ನಿರ್ದೇಶಿಸುತ್ತಿದ್ದಾರೆ. ಈ  ಹೊಸ  ಚಿತ್ರವನ್ನು ಮೊನ್ನೆ ನಡೆದ ಖನನ ಚಿತ್ರದ 50ನೇ ದಿನದ ಸಮಾರಂಭದಲ್ಲಿ  ಘೋಷಿಸಲಾಯಿತು.

ಇವರಿಗೆ ಇದು ಮೊದಲ ಚಿತ್ರ. ಕಳೆದ ಹತ್ತು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಇವರು, ನಿರ್ದೇಶಕ ನಾಗಣ್ಣ ಅವರ ಬಳಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಕಳೆದ ಒಂದೂವರೆ ವರ್ಷದಿಂದಲೂ  ಈ ಚಿತ್ರದ ಕಥೆ ಹೆಣೆಯುವ  ಕೆಲಸದಲ್ಲಿದ್ದ ರಾಹುಲ್ ಈರಯ್ಯ, ಖನನ ಚಿತ್ರ ನೋಡಿದ ಬಳಿಕ ನಾಯಕ ತಮ್ಮ ಕಥೆಗೆ ಸರಿ ಹೊಂದುತ್ತಾರೆ ಎಂದು ಆಯ್ಕೆ ಮಾಡಿದ್ದಾರಂತೆ.  ಈ  ಚಿತ್ರದಲ್ಲಿ ಆರ್ಯವರ್ಧನ್  ಜೊತೆಗೆ ಈ ಹಿಂದೆ ರವಿ ಹಿಸ್ಟರಿ  ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಕಾರ್ತಿಕ್ ಈ ಚಿತ್ರದ ಮತೊಬ್ಬ ಹೀರೋ. ಅಂದಹಾಗೆ, ಇದೊಂದು ಮರ್ಡರ್  ಮಿಸ್ಟರಿ ಹೊಂದಿರುವ ಚಿತ್ರವಾಗಿದೆ. ಚಿತ್ರದಲ್ಲಿ  ಸಾಕಷ್ಟು ಥ್ರಿಲ್ಲರ್ ಅಂಶಗಳಿವೆ.  ಸದ್ಯಕ್ಕೆ  ಚಿತ್ರದ ಇಬ್ಬರು ಹೀರೋಗಳು ಪಕ್ಕಾ ಆಗಿದ್ದು, ಉಳಿದಂತೆ ನಾಯಕಿ ಇನ್ನಿತರೆ ಪಾತ್ರಗಳು ಆಯ್ಕೆಯಾಗಬೇಕಿದೆ  ಎನ್ನುತ್ತಾರೆ ನಿರ್ದೇಶಕ ರಾಹುಲ್ ಈರಯ್ಯ. ಇತ್ತೀಚೆಗೆ  ಈ  ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು.  ಈ ಚಿತ್ರಕ್ಕೆ ಸುನೀಲ್ ಅವರು   ಛಾಯಾಗ್ರಹಣ ಮಾಡುತ್ತಿದ್ದಾರೆ.

CG ARUN

ಮತ್ತೊಮ್ಮೆ ತಾಜ್‌ಮಹಲ್!

Previous article

ಮಳೆಬಿಲ್ಲಿಗೆ ಮೋಸ ಮಾಡಿದಳಂತೆ!

Next article

You may also like

Comments

Leave a reply

Your email address will not be published. Required fields are marked *