ಬಿಲ್ವ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ನವೀನ್ ಕುಮಾರ್ ಜಿ. ಆರ್ ಅವರು ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಕಾಣೆಯಾದವರ ಬಗ್ಗೆ ಪ್ರಕಟಣೆ. ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಅವರು ಈ ಹಿಂದೆ ಶಕ್ತಿ, ದಿಲ್ ವಾಲಾ, ಕೃಷ್ಣ ರುಕ್ಕು, Rambo 2 ನಿರ್ದೇಶನ ಮಾಡಿದ್ದರು. ಅಲ್ಲದೇ ಕಿರಾತಕ 2, ದಾರಿ ತಪ್ಪಿದ ಮಗ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ಸಮಾರಂಭ ಬ್ಯಾಂಕಾಕ್ ನಲ್ಲಿ ನೆರವೇರಿದ್ದು, 16 ದಿನಗಳ ಕಾಲ ಬ್ಯಾಂಕಾಕ್ ನಲ್ಲಿಯೇ ಚಿತ್ರೀಕರಣ ನಡೆಯಲಿದೆ. 35 ಜನರ ತಂಡ ಈಗಾಗಲೇ ಬ್ಯಾಂಕಾಕ್ ನಲ್ಲಿ ಬೀಡು ಬಿಟ್ಟಿದ್ದು, ಸಿನಿಮಾದ ಟಾಕಿ ಪೋರ್ಷನ್ ಮತ್ತು ಒಂದು ಹಾಡಿನ ಚಿತ್ರೀಕರಣವನ್ನು ಮಾಡಲಿದೆ. 65 ವರ್ಷ ಮೇಲ್ಪಟ್ಟವರ (ಹಿರಿಯ ನಾಗರೀಕರ) ಬಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಉಳಿದಂತೆ ಅರ್ಜುನ್ ಜನ್ಯಾ ಸಂಗೀತ, ಶಿವಕುಮಾರ್ ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಸಂಯೋಜನೆ ಚಿತ್ರಕ್ಕಿದೆ.