ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದ ನಿಮಿತ್ತ ಗಣ್ಯಾತಿಗಣ್ಯರೆಲ್ಲರೂ ಭಾಗಿಯಾಗಿದ್ದರು. ಸಿನಿ ತಾರೆಯರ ದಂಡು ಆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಬಾಲಿವುಡ್ ನ ಬಹುತೇಕರು ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಪದಗ್ರಹಣ ಮಾಡಿದ್ದನ್ನು ನೋಡಿ ಕಣ್ತುಂಬಿಕೊಂಡರು. ಈ ಪೈಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಏರ್ ಫೋರ್ಟ್ ಗೆ ಬಂದಾಗ ಅವರು ಧರಿಸಿದ್ದ ಬಿಳಿ ಬಣ್ಣದ ಡ್ರೆಸ್ಸು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು.
https://www.instagram.com/p/ByEr7O8F2Io/?utm_source=ig_web_copy_link
ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಧರಿಸಿದ್ದ ಡ್ರೆಸ್ಸಿನ ಕುರಿತಾಗಿಯೇ ಮಾತುಕತೆಗಳಾಗುತ್ತಿದ್ದು, ಕೆಲವರು ಕಂಗನಾ ಬೆಸ್ಟ್ ಡ್ರೆಸ್ ಚಾಯ್ಸ್ ಮಾಡಿದ್ದಾರೆ, ಬಿಳಿ ಬಣ್ಣದ ದಿರಿಸು ಬಿಸಿಲಿನ ಸಮಯದಲ್ಲಿ ಸೂಕ್ತ ಎಂದು ಕೊಂಡಾಡಿದ್ದಾರೆ. ಇನ್ನು ಕೆಲವರು, ಅತಿ ಎನಿಸುವ, ಒಳ ಉಡುಪು ಸಹ ಕಾಣಿಸುವಂತಹ ಈ ಪಾರದರ್ಶಕ ಉಡುಪಿನಲ್ಲಿ ಕಂಗನಾ ಕಾಣಿಸಿಕೊಳ್ಳುವುದು ಬೇಕಿತ್ತಾ? ಎಂದು ಮೂದಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಏರ್ ಪೋರ್ಟ್ಸ್ ಲುಕ್ಸ್ ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಹಳ ಮುಖ್ಯವಾಗಿದ್ದು, ಅದಕ್ಕಾಗಿಯೇ ಬಹುತೇಕ ನಟ ನಟಿಯರು ಟ್ರೆಂಡಿಂಗ್ ಔಟ್ ಫಿಟ್ ನಲ್ಲಿ ಕಾಣಿಸಿಕೊಳ್ಳುವುದೇ ಟ್ರೆಂಡ್ ಆಗಿಬಿಟ್ಟಿದೆ.
No Comment! Be the first one.